ಭಟ್ಕಳ: ಭಟ್ಕಳದಲ್ಲಿ ಯುಜಿಡಿ ಒಳಚರಂಡಿ ಕಾಮಗಾರಿಯ ಅವಾಂತರಗಳು ದಿನೆ ದಿನೆ ಹೊಸ ರೂಪ ಪಡೆದುಕೊಳ್ಳುತ್ತಿದ್ದು ಇದರ ಕಳಪೆ ಕಾಮಗಾರಿ ಜನರ ಮುಂದೆ ತೆರೆದುಕೊಳ್ಳುತ್ತಿದೆ.
ಹೌದು ಭಟ್ಕಳ ಜಾಲಿ ರಸ್ತೆಯಲ್ಲಿ ಯುಜಿಡಿ ಪೈಪ್ ಹಾಕುವ ಮೂಲಕ ಮಣ್ಣು ತುಂಬಿದ ಕಡೆ, ಲಾರಿಯ ಎರಡೂ ಚಕ್ರಗಳು ಒಂದೇ ಸ್ಥಳದಲ್ಲಿ ಸಿಲುಕಿಕೊಂಡಿವೆ. ವಿದ್ಯುತ್ ಕಂಬ ಲಾರಿಗೆ ಆಸರೆಯಾಗಿದ್ದು, ಇಲ್ಲದಿದ್ದರೆ ಲಾರಿ ಪಲ್ಟಿಯಾಗುತ್ತಿತ್ತು.
ಇತ್ತಿಚೆಗೆ ಶಾಲಾ ವಾಹನವೊಂದು ಮಕ್ಕಳನ್ನು ಶಾಲೆಗೆ ಸಾಗಿಸುವಾಗ ಇಂತಹದ್ದೆ ರಸ್ತೆ ಮದ್ಯದಲ್ಲಿ ಮಣ್ಣು ಮುಚ್ಚಿದ ಕಡೆ ಎರಡು ಚಕ್ರಗಳು ನೆಲದಲ್ಲಿ ಹುದುಗಿಕೊಂಡಿದ್ದು ಯಾವುದೇ ಅನಾಹುತವಾಗದೆ ವಿದ್ಯಾರ್ಥಿಗಳು ಬಚಾವ್ ಆಗಿದ್ದರು.
ಈಗ ಮತ್ತೆ ಅಂತಹದ್ದೆ ಘಟನೆಯೊಂದು ಜರಗಿದ್ದು ವಾಹನ ಸವಾರರು ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ವಾಹನ ಚಾಲನೆ ಮಾಡಬೇಕಾಂದತಹ ಸ್ಥಿ ನಿರ್ಮಾಣಗೊಂಡಿದೆ. ಇದಕ್ಕೆ ತಾಲೂಕಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.