ನೋಂದಣಿ ಮಾಡಿಸದಿದ್ದರೆ ಉಚಿತ ವಿದ್ಯುತ್ ಸಿಗಲ್ಲ, ಇಂಧನ ಇಲಾಖೆಯಿಂದ ಮಹತ್ವದ ಸೂಚನೆ

ಬೆಂಗಳೂರು: ಜುಲೈ 01ರಿಂದ ಗೃಹಜ್ಯೋತಿ ಯೋಜನೆ ಅಧಿಕೃತವಾಗಿ ಆರಂಭವಾಗಿದೆ. ಈ ನಿಟ್ಟಿನಲ್ಲಿ ಜುಲೈ 25 ರೊಳಗೆ ಅರ್ಜಿ ಸಲ್ಲಿಸಲು ಇಂಧನ‌ ಇಲಾಖೆ ಸೂಚನೆ ನೀಡಿದೆ. ಗೃಹಜ್ಯೋತಿಗೆ ಅರ್ಜಿ ಹಾಕುವುದು ತಡವಾದ್ರೆ 200 ಯುನಿಟ್ ಉಚಿತ ವಿದ್ಯುತ್ ಸಿಗುವುದಿಲ್ಲ. ಜುಲೈ 25 ರೊಳಗೆ ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡರೆ ಜುಲೈ ತಿಂಗಳಿಗೆ ಉಚಿತ ವಿದ್ಯುತ್ ಪಡೆಯಲು ಸಾಧ್ಯವಾಗುತ್ತದೆ ಎಂದು ಇಂಧನ ಇಲಾಖೆ ಸೂಚನೆ ನೀಡಿದೆ.

ಕಾಂಗ್ರೆಸ್​ ಸರ್ಕಾರದ ಮಹತ್ವದ ಸ್ಕೀಮ್ ಆದಾ ಗೃಹಜ್ಯೋತಿ ಸ್ಕೀಮ್ ಗೆ ಅರ್ಜಿ ಸಲ್ಲಿಕೆ ಬರದಿಂದ ಸಾಗುತ್ತಿದೆ.‌ ಮತ್ತೊಂದೆಡೆ ಗೃಹಜ್ಯೋತಿ 200 ಯುನಿಟ್ ಕೌಂಟಿಂಗ್ ಜುಲೈ 01ರಿಂದ ಆರಂಭವಾಗಿದೆ. ಗೃಹಜ್ಯೋತಿಗೆ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರಿಗೂ ಉಚಿತ ವಿದ್ಯುತ್ ಸಿಗಲಿದೆ.‌ ಜುಲೈ ತಿಂಗಳ ಬಿಲ್‌ ಬರುವ ಮುನ್ನ ಅರ್ಜಿ ಸಲ್ಲಿಸಬೇಕು.‌ ಇಲ್ಲದಿದ್ರೆ ಕರೆಂಟ್‌ಗೆ ಬಿಲ್ ಹಣವನ್ನ ಕಟ್ಟಲೇಬೇಕಾಗುತ್ತದೆ.

ಗೃಹಜ್ಯೋತಿಗೆ ಅರ್ಜಿ ಹಾಕುವುದು ತಡವಾದ್ರೆ 200 ಯುನಿಟ್ ಉಚಿತ ವಿದ್ಯುತ್ ಸಿಗುವುದಿಲ್ಲ. ಜುಲೈ 25 ರೊಳಗೆ ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡರೆ ಜುಲೈ ತಿಂಗಳಿಗೆ ಉಚಿತ ವಿದ್ಯುತ್ ಪಡೆಯಲು ಸಾಧ್ಯವಾಗುತ್ತದೆ. ಅದೇ ರೀತಿ ಆಗಸ್ಟ್ 25 ರೊಳಗೆ ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡರೆ, ಆ ತಿಂಗಳಿಗೆ ಮಾಸಿಕ ಬಳಕೆಯು ಸರಾಸರಿ 200 ಯೂನಿಟ್‌ಗಳಿಗಿಂತ ಕಡಿಮೆಯಿದ್ದಲ್ಲಿ ವಿದ್ಯುತ್ ಉಚಿತವಾಗಿ ಪಡೆಯಬಹುದು. ಮೀಟರ್ ರೀಡಿಂಗ್ ಪ್ರತಿ ತಿಂಗಳ 25ನೇ ತಾರೀಖಿನಿಂದ ಮುಂದಿನ ತಿಂಗಳ 25ನೇ ತಾರೀಖಿನವರೆಗೆ ನಡೆಯುತ್ತದೆ. ಹೀಗಾಗಿ ಗೃಹಜ್ಯೋತಿ 25 ರೊಳಗೆ ಅರ್ಜಿ ಸಲ್ಲಿಸಲು ಇಂಧನ‌ ಇಲಾಖೆ ಸೂಚನೆ ನೀಡಿದೆ.

ಸರ್ಕಾರದ ನಿಗಧಿ ಮಾಡಿರುವ 200 ಯುನಿಟ್​ನಲ್ಲಿ 187 ಯುನಿಟ್ ವರೆಗೂ ಫ್ರೀ ಇರಲಿದೆ.‌ ಇದರ ಜೊತೆಗೆ ಸರಾಸರಿ ಆದಾರದ ಮೇಲೆ 10 % ವಿದ್ಯುತ್ ಬಳಕೆಗೆ ಅವಕಾಶ ಇದೆ.‌ ಆದ್ರೆ ಸರಾಸರಿಯನ್ನ ಮೀರಿ 200 ಯುನಿಟ್ ಮೇಲೆ ಒಂದೇ ಒಂದು ಯುನಿಟ್ ಜಾಸ್ತಿ‌ ಬಳಕೆ ಮಾಡಿದ್ರೆ, ಹೆಚ್ಚುವರಿ ಬಳಸಿದ ವಿದ್ಯುತ್‌ಗೆ ಬಿಲ್‌ ಪಾವತಿಸಬೇಕಾಗುತ್ತದೆ.‌ ಗೃಹಜ್ಯೋತಿಗೆ ಬೆಂಗಳೂರು ಒನ್ , ಕರ್ನಾಟಕ ಒನ್ , ಗ್ರಾಮ‌ಒನ್ ಗಳಲ್ಲಿ ಅರ್ಜಿ ನೋಂದಣಿ ಮಾಡಲಾಗುತ್ತಿದೆ.