ಚಾಮರಾಜನಗರ: ಶಕ್ತಿ ಯೋಜನೆಯನ್ನು ಸರ್ಕಾರ ಜಾರಿಗೆ ತಂದಾಗಿನಿಂದ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗ್ತಾನೇ ಇದೆ. ಸಾರಿಗೆ ಬಸ್‍ಗಳಲ್ಲಿ ಈಗ ಮಹಿಳೆಯರದ್ದೇ ಹವಾ ಎಂಬಂತಾಗಿದೆ. ಇದೀಗ ಮಹಿಳೆಯರು ಟಿಕೆಟ್ ಪಡೆದು ಪ್ರಯಾಣಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಮಹಿಳೆಯರು ಚೌಡಹಳ್ಳಿಯಿಂದ ಗುಂಡ್ಲುಪೇಟೆಗೆ ಹಣ ನೀಡಿ ಟಿಕೆಟ್ ಕೇಳಿದ್ದಾರೆ. ಈ ವೇಳೆ ನಿಮಗೆ ಉಚಿತ ಪಯಣದ ಅವಕಾಶವಿದೆ ಹಣ ಕೊಡಬೇಕಿಲ್ಲ ಎಂದರೂ ಮಹಿಳೆಯರು ಕೇಳಲಿಲ್ಲ. ಕೊನೆಗೆ ಮಹಿಳೆಯರ ಒತ್ತಾಯಕ್ಕೆ ಮಣಿದು ನಿರ್ವಾಹಕ ಹಣ ಪಡೆದು ಟಿಕೆಟ್ ನೀಡಿದ್ದಾರೆ.
ನಾವು ಉಚಿತ ಪಯಣ ಮಾಡಿದರೆ ಸರ್ಕಾರದ ಆರ್ಥಿಕತೆಗೆ ಪೆಟ್ಟು ಬೀಳುತ್ತೆ. ಹೀಗಾಗಿ ನಮಗೆ ಉಚಿತ ಪ್ರಯಾಣ ಬೇಡ. ಹಣ ಕೊಡುತ್ತೇವೆ ಟಿಕೆಟ್ ಕೊಡಿ ಎಂದು ಮಹಿಳೆಯರು ಹೇಳಿದ್ದಾರೆ ಎಂದು ಫೇಸ್ ಬುಕ್‍ನಲ್ಲಿ ಬರೆದುಕೊಂಡಿದ್ದಾರೆ. ಕಂಡಕ್ಟರ್ ಮಹೇಶ್ ಪೋಸ್ಟ್ ಗೆ ಇದೀಗ ಸಾಕಷ್ಟು ಕಾಮೆಂಟ್‍ಗಳು ಬರುತ್ತಿದೆ.
ಗುರುವಾರವಷ್ಟೇ ಹೊಸಕೋಟೆಯಲ್ಲಿ ಕುಡುಕ ಪತಿಮಹಾಶಯನೊಬ್ಬ ದಯವಿಟ್ಟು ಶಕ್ತಿ ಯೋಜನೆಯನ್ನು ರದ್ದುಗೊಳಿಸಿ. ನನ್ನ ಪತ್ನಿ ಟ್ರಿಪ್‍ಗೆ ಅಂತ ಹೋದವಳು ಇನ್ನೂ ಮನೆಗೆ ವಾಪ್ ಬಂದಿಲ್ಲ. ಸಿದ್ದರಾಮಯ್ಯ ಸರಿಯಲ್ಲ ಎಂದು ಗೋಗರೆಯುತ್ತಾ ಬಸ್ ಚಕ್ರದಡಿ ತಲೆಯಿಟ್ಟು ರದ್ದಾಂತ ಮಾಡಿದ್ದನು.