ಮೆಕ್ಸಿಕೋದಲ್ಲಿ ಗರಿಷ್ಠ ತಾಪಮಾನ 50 ಡಿಗ್ರಿ ಸೆಲ್ಸಿಯಸ್ಗೆ ತಲುಪಿದ್ದು, ಉಷ್ಣ ಅಲೆ ಯಿಂದಾಗಿ 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮೆಕ್ಸಿಕೊದಲ್ಲಿ ಕಳೆದ ಎರಡು ವಾರಗಳಲ್ಲಿ ಕನಿಷ್ಠ 100 ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ. ಕೆಲವು ಪ್ರದೇಶಗಳಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು, ಬಹಳಷ್ಟು ಮಂದಿ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ್ದಾರೆ.
ಮೂರನೇ ಎರಡರಷ್ಟು ಸಾವುಗಳು ಜೂನ್ 18-24 ರ ವಾರದಲ್ಲಿ ಸಂಭವಿಸಿವೆ, ಉಳಿದವು ಹಿಂದಿನ ವಾರದಲ್ಲಿ ಸಂಭವಿಸಿವೆ ಎಂದು ಸಚಿವಾಲಯ ತಿಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಈ ಶಾಖದ ಅಲೆಯಿಂದಾಗಿ ಓರ್ವ ಮೃತಪಟ್ಟಿದ್ದರು.
ಬಹುತೇಕ ಎಲ್ಲಾ ಸಾವುಗಳು ಹೀಟ್ ಸ್ಟ್ರೋಕ್‌ಗೆ ನಿಂದಲೇ ಸಂಭವಿಸಿದ್ದು, ಬೆರಳೆಣಿಕೆಯಷ್ಟು ನಿರ್ಜಲೀಕರಣದಿಂದ ಸಂಭವಿಸಿವೆ. ಸುಮಾರು ಶೇ. 64ರಷ್ಟು ಸಾವುಗಳು ಟೆಕ್ಸಾಸ್‌ನ ಗಡಿಯಲ್ಲಿರುವ ಉತ್ತರ ರಾಜ್ಯವಾದ ನ್ಯೂವೊ ಲಿಯಾನ್‌ನಲ್ಲಿ ಸಂಭವಿಸಿವೆ.
ಉಳಿದವುಗಳಲ್ಲಿ ಹೆಚ್ಚಿನವು ಗಲ್ಫ್ ಕರಾವಳಿಯ ನೆರೆಯ ತಮೌಲಿಪಾಸ್ ಮತ್ತು ವೆರಾಕ್ರಜ್‌ನಲ್ಲಿವೆ. ಇನ್ನೂ ಶಾಖದ ಅಲೆ ಕಡಿಮೆಯಾಗಿಲ್ಲ, ಸೊನೊರಾ ರಾಜ್ಯದಲ್ಲಿ, ಅಕೊಂಚಿ ಪಟ್ಟಣದಲ್ಲಿ ಬುಧವಾರದಂದು 49 ಡಿಗ್ರಿ ಗರಿಷ್ಠ ಉಷ್ಣಾಂಶ ದಾಖಲಾಗಿತ್ತು.