ಹುಲಿ ದಾಳಿಗೆ ಓರ್ವ ಸಾವು, ಕೋಪಗೊಂಡು ಅರಣ್ಯಾಧಿಕಾರಿ, ಭದ್ರತಾ ಸಿಬ್ಬಂದಿಯನ್ನು ಥಳಿಸಿದ ಜನ

ತಪ್ಪು ಮಾಡಿದ್ದು ಯಾರೋ, ಶಿಕ್ಷೆ ಅನುಭವಿಸಿದ್ದು ಮತ್ಯಾರೋ, ಹೌದು, ಹುಲಿಯೊಂದು ದಾಳಿ ನಡೆಸಿ ಓರ್ವ ಮೃತಪಟ್ಟಿದ್ದ ಆ ಕೋಪದಲ್ಲಿ ಜನರ ಗುಂಪೊಂದು ಅರಣ್ಯಾಧಿಕಾರಿ ಹಾಗೂ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಥಳಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಹುಲಿಯನ್ನು ಹಿಡಿಯಲು ಸಿಬ್ಬಂದಿ ಮಹಾರಾಷ್ಟ್ರದ ಭಂಡಾರಾ ಜಿಲ್ಲೆಗೆ ತಲುಪಿದ್ದರು ಈ ಸಮಯದಲ್ಲಿ ಅಧಿಕಾರಿಗಳ ಮೇಲೆ ಜನರ ಗುಂಪು ಹಲ್ಲೆ ನಡೆಸಿದೆ.

ದಾಳಿಯಲ್ಲಿ ಗಾಯಗೊಂಡಿರುವ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಮತ್ತು ಇಬ್ಬರು ಅರಣ್ಯ ಸಿಬ್ಬಂದಿ ನಾಗ್ಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಭಂಡಾರದ ಪಯೋನಿ ತಹಸಿಲ್‌ನ ಖಟ್ಖೇಡಾ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಹುಲಿಯು ಈಶ್ವರ್ ಮೋಟ್‌ಘರೆ ಎಂಬ ವ್ಯಕ್ತಿಯನ್ನು ಕೊಂದಿದೆ. ಅಧಿಕಾರಿಗಳು ಮತ್ತು ಇತರ ಸಿಬ್ಬಂದಿ ಹುಲಿಯನ್ನು ಸೆರೆಹಿಡಿಯಲು ಅಲ್ಲಿಗೆ ತಲುಪಿದಾಗ, ಕೋಪಗೊಂಡ ಸ್ಥಳೀಯರು ಹಲ್ಲೆ ನಡೆಸಿದ್ದಾರೆ.

ನಂತರ ಮಹಾರಾಷ್ಟ್ರ ಅರಣ್ಯ ಇಲಾಖೆ ಸಿಬ್ಬಂದಿ ಹುಲಿಯನ್ನು ಶಾಂತಗೊಳಿಸಿ ನಾಗ್ಪುರದ ಗೋರೆವಾಡ ರಕ್ಷಣಾ ಕೇಂದ್ರಕ್ಕೆ ಕಳುಹಿಸಿದ್ದಾರೆ. ಮೃತರ ಕುಟುಂಬಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) 30 ಸಾವಿರ ನಗದು ಮತ್ತು 9.70 ಲಕ್ಷ ಚೆಕ್ ನೀಡಿದ್ದಾರೆ.