ದರ್ಗಾದಲ್ಲಿ ಮಹಿಳೆಯೊಬ್ಬಳು ನೃತ್ಯ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ರಾಜಸ್ಥಾನ ಅಜ್ಮೇರ್ನ ಷರೀಫ್ ದರ್ಗಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ನೃತ್ಯ ಮಾಡುವುದನ್ನು ನೀವು ನೋಡಬಹುದು. ಮಹಿಳೆಯ ಕಿವಿಯಲ್ಲಿ ಇಯರ್ಫೋನ್ ಇದ್ದು, ಹಾಡು ಕೇಳುತ್ತಾ ಆಕೆ ಓಡಾಡುವುದನ್ನು ಕಾಣಬಹುದು, ಇದ್ದಕ್ಕಿದ್ದಂತೆ ನೃತ್ಯ ಮಾಡಲು ಪ್ರಾರಂಭಿಸುತ್ತಾಳೆ. ಈ ವಿಡಿಯೋ ವೈರಲ್ ಆದ ಬಳಿಕ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಜ್ಮೇರ್ನ ಖ್ವಾಜಾ ಮೊಯಿನುದ್ದೀನ್ ಚಿಶ್ತಿಯಾ ದರ್ಗಾದಲ್ಲಿ ಈ ಘಟನೆ ನಡೆದಿದೆ. ದರ್ಗಾ ಆವರಣದಲ್ಲಿರುವ ಝಲ್ರಾ ದಲನ್ನಲ್ಲಿ ಮಹಿಳೆ ಡ್ಯಾನ್ಸ್ ಮಾಡಿದ್ದಾರೆ.
ದರ್ಗಾದಲ್ಲಿ ಭದ್ರತಾ ಸಿಬ್ಬಂದಿಗಳಿದ್ದಾರೆ ಆದರೆ ಯಾರೂ ಕೂಡ ಈ ಮಹಿಳೆಯನ್ನು ನೋಡಿಲ್ಲ, ಧಾಮಿಧಕ ಸ್ಥಳದಲ್ಲಿ ಆ ಮಹಿಳೆಗೆ ಹೇಗಿರಬೇಕೆಂಬುದು ತಿಳಿದಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ.
ದೇಶದ ಅತ್ಯಂತ ಪೂಜ್ಯ ಧಾರ್ಮಿಕ ಸ್ಥಳಗಳಲ್ಲಿ ಒಂದಾದ ಅಜ್ಮೀರ್ ದೇಗುಲಕ್ಕೆ ಹಲವಾರು ಸಮುದಾಯಗಳ ಸದಸ್ಯರು ಭೇಟಿ ನೀಡುತ್ತಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಉಜ್ಜಯಿನಿಯ ಮಹಾಕಾಲ್ ದೇವಸ್ಥಾನದ ಆವರಣದಲ್ಲಿ ಇನ್‌ಸ್ಟಾಗ್ರಾಮರ್‌ಗಳು ಡ್ಯಾನ್ಸ್ ವಿಡಿಯೋಗಳನ್ನು ರೆಕಾರ್ಡ್ ಮಾಡಿ ವಿವಾದಕ್ಕೆ ಕಾರಣರಾಗಿದ್ದರು.