ನವದೆಹಲಿ: ಸುರಂಗದಲ್ಲಿ ಅಡ್ಡಗಟ್ಟಿ ಹಾಡಹಗಲೇ ದರೋಡೆ; ಎಲ್​​ಜಿ ರಾಜೀನಾಮೆ ನೀಡಬೇಕೆಂದು ಕೇಜ್ರಿವಾಲ್ ಪಟ್ಟು

ದೆಹಲಿ: ಪ್ರಗತಿ ಮೈದಾನದ ಸುರಂಗದೊಳಗೆ ಹಗಲು ಹೊತ್ತಿನಲ್ಲಿ ಇಬ್ಬರು ವ್ಯಕ್ತಿಗಳನ್ನು  ದರೋಡೆ ಮಾಡಿದ ಒಂದು ದಿನದ ನಂತರ, ರಾಷ್ಟ್ರ ರಾಜಧಾನಿಯಲ್ಲಿ ಅಪರಾಧದ ಹೆಚ್ಚಳಕ್ಕಾಗಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ರಾಜೀನಾಮೆ ನೀಡಬೇಕು ಎಂದು ದೆಹಲಿ ಮುಖ್ಯಮಂತ್ರಿ  Arvind Kejriwal ಒತ್ತಾಯಿಸಿದ್ದಾರೆ. ದೆಹಲಿಯ ನಿವಾಸಿಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸುವ ವ್ಯಕ್ತಿಗಳಿಗೆ ಸಕ್ಸೇನಾ ದಾರಿ ಮಾಡಿಕೊಡಬೇಕು ಎಂದ ಕೇಜ್ರಿವಾಲ್, ಎಎಪಿ ನೇತೃತ್ವದ ಸರ್ಕಾರಕ್ಕೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಹಸ್ತಾಂತರಿಸುವಂತೆ ಕೇಂದ್ರ ಸರ್ಕಾರಕ್ಕೆ ಕರೆ ನೀಡಿದರು.

ಎಲ್‌ಜಿ ರಾಜೀನಾಮೆ ಕೊಡಲಿ. ದೆಹಲಿಯ ಜನರಿಗೆ ಸುರಕ್ಷತೆ ಮತ್ತು ಭದ್ರತೆಯನ್ನು ಒದಗಿಸುವ ಯಾರಿಗಾದರೂ ದಾರಿ ಮಾಡಿಕೊಡಿ. ದೆಹಲಿಯನ್ನು ಸುರಕ್ಷಿತವಾಗಿಡಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗದಿದ್ದರೆ ಅದನ್ನು ನಮಗೆ ಒಪ್ಪಿಸಿ. ನಗರವನ್ನು ಅದರ ನಾಗರಿಕರಿಗೆ ಹೇಗೆ ಸುರಕ್ಷಿತವಾಗಿಸುವುದು ನಾವು ನಿಮಗೆ ತೋರಿಸುತ್ತೇವೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.