ನವದೆಹಲಿ(ಜೂ.20): ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವ್ಯಾಟ್ಸ್ಆ್ಯಪ್ ಹಲವು ಫೀಚರ್ಸ್ ಪರಿಚಯಿಸಿದೆ. ಇದರ ಜೊತೆಗೆ ಬಳಕೆದಾರರ ಸುರಕ್ಷತೆಗಾಗಿ ಹೆಚ್ಚಿನ ಅನಕೂಲತೆಗಳನ್ನು ಮಾಡಿದೆ. ಇದೀಗ ವ್ಯಾಟ್ಸ್ಆ್ಯಪ್ ಬಳಕೆದಾರರ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದೆ. ಇದೀಗ ವ್ಯಾಟ್ಸ್ಆ್ಯಪ್ ಬಳಕೆದಾರರಿಗೆ ಬರುವ ಅನತ್ಯ ಕಾಲ್ ಕಿರಿ ಕಿರಿ ತಪ್ಪಿಸಲು ಹೊಸ ಫೀಚರ್ ಪರಿಚಯಿಸಿದೆ. ಇದೀಗ ಅನ್‌ನೋನ್ ಕಾಲ ಮ್ಯೂಟ್ ಫೀಚರ್ ಪರಿಚಯಿಸಲಾಗಿದೆ. ಈ ಫೀಚರ್ ಮೂಲಕ ಬಳಕೆದಾರರು ತಮ್ಮ ಸಂಪರ್ಕದಲ್ಲಿರದ, ಕಂಪನಿಗಳ, ಅಪರಿಚಿತ ಕರೆಗಳನ್ನು ಸೈಲೆಂಟ್ ಮಾಡಲಿದೆ. ಈ ಮೂಲಕ ಬಳಕೆದಾರರಿಗೆ ವ್ಯಾಟ್ಸ್ಆ್ಯಪ್ ಮೇಲೆ ಸಂಪೂರ್ಣ ನಿಯಂತ್ರಣ ಹಾಗೂ ಸುರಕ್ಷತೆಯನ್ನು ನೀಡಲಿದೆ.
ಅನಗತ್ಯ ಕರೆಗಳ ಕಿರಿಕಿಯಿಂದ ಜನ ಹೈರಾಣಾಗುತ್ತಿದ್ದಾರೆ. ಇದರಿಂದ ವ್ಯಾಟ್ಸ್ಆ್ಯಪ್ ಹೊಸ ಫೀಚರ್ ಪರಿಚಯಿಸಿದೆ. ಅನ್‌ನೋನ್ ಕಾಲ್ ಸೈಲೆಂಟ್ ಫೀಚರ್ ಮೂಲಕ ಯಾವುದೇ ಅಪರಿಚಿತ ಕರೆಗಳು ಮ್ಯೂಟ್ ಆಗಲಿದೆ. ಇದರಿಂದ ಬಳಕೆದಾರರು ಕರೆ ಸ್ವೀಕರಿಸುವ , ಸಮಯ ವ್ಯರ್ಥ ಮಾಡುವ ಅವಶ್ಯಕತೆ ಇಲ್ಲ. ವ್ಯಾಟ್ಸ್ಆ್ಯಪ್ ನೂತನ ಫೀಚರ್ ಕುರಿತು ಬಳಕೆದಾರರು ಸಂತಸ ವ್ಯಕ್ತಪಡಿಸಿದ್ದಾರೆ.