ಜಿಎಸ್​ಟಿ ಮಾತ್ರವಲ್ಲ, ಈ ಹಣಕಾಸು ವರ್ಷದಲ್ಲಿ ನೇರ ತೆರಿಗೆ ಸಂಗ್ರಹದಲ್ಲೂ ಗಮನಾರ್ಹ ಹೆಚ್ಚಳ; ಇಲ್ಲಿದೆ ಡೀಟೇಲ್ಸ್

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ (2023-24) ನೇರ ತೆರಿಗೆ ಸಂಗ್ರಹ ಗಮನಾರ್ಹವಾಗಿ ಏರುತ್ತಿರುವುದು ಸರ್ಕಾರ ಬಿಡುಗಡೆ ಮಾಡಿದ ಅಂಕಿ ಅಂಶಗಳಿಂದ ತಿಳಿದುಬರುತ್ತದೆ. 2023 ಏಪ್ರಿಲ್ 1ರಿಂದ ಜೂನ್ 17ರವರೆಗೆ ಸಂಗ್ರಹವಾದ ಒಟ್ಟು ನೇರ ತೆರಿಗೆ  ಯಲ್ಲಿ  ಹಿಂದಿನ ವರ್ಷದ ಇದೇ ಅವಧಿಗಿಂತ ಶೇ. 12.73ರಷ್ಟು ಹೆಚ್ಚಾಗಿದೆ. ಇನ್ನು, ನಿವ್ವಳ ನೇರ ತೆರಿಗೆಯು ಈ ಅವಧಿಯಲ್ಲಿ ಶೇ. 11.18ರಷ್ಟು ಹೆಚ್ಚಾಗಿದೆ.

ಹಣಕಾಸು ಇಲಾಖೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, 2023ರ ಏಪ್ರಿಲ್ 1ರಿಂದ ಜೂನ್ 17ರವರೆಗೆ ಸಂಗ್ರಹವಾದ ಒಟ್ಟು ಡೈರೆಕ್ಟ್ ಡ್ಯಾಕ್ಸ್ ಮೊತ್ತ 4,19,338 ಕೋಟಿ ರೂ ಇದೆ. ಹಿಂದಿನ ವರ್ಷದಲ್ಲಿ ಇದು 3,71,982 ಕೋಟಿ ರೂ ಇತ್ತು. ಇನ್ನು, ನಿವ್ವಳ ತೆರಿಗೆ ಮೊತ್ತ ಈ ವರ್ಷ 3,79,760 ಕೋಟಿ ರೂ ಇದೆ. ಇಲ್ಲಿ ರೀಫಂಡ್ ಮಾಡಿದ ಹಣ ಕಳೆದು ಉಳಿದ ಮೊತ್ತವು ನಿವ್ವಳ ತೆರಿಗೆ ಸಂಗ್ರಹವಾಗುತ್ತದೆ.

ಒಟ್ಟು ನೇರ ತೆರಿಗೆ ಸಂಗ್ರಹ ವಿವರ

  • ಕಾರ್ಪೊರೇಶನ್ ಟ್ಯಾಕ್ಸ್: 1,87,311 ಕೋಟಿ ರೂ
  • ಪರ್ಸನಲ್ ಇನ್ಕಮ್ ಟ್ಯಾಕ್ಸ್ (ಪಿಐಟಿ): 2,31,391 ಕೋಟಿ ರೂ.

ತೆರಿಗೆ ಸಂಗ್ರಹದ ಇನ್ನಷ್ಟು ವಿವರ

  • ಅಡ್ವಾನ್ಸ್ ಟ್ಯಾಕ್ಸ್: 1,16,776 ಕೋಟಿ ರೂ
  • ಟಿಡಿಎಸ್: 2,71,849 ಕೋಟಿ ರೂ
  • ಸೆಲ್ಫ್ ಅಸೆಸ್ಮೆಂಟ್ ಟ್ಯಾಕ್ಸ್: 18,128 ಕೋಟಿ ರೂ
  • ರೆಗ್ಯುಲರ್ ಅಸೆಸ್ಮೆಂಟ್ ಟ್ಯಾಕ್ಸ್: 9,977 ಕೋಟಿ ರೂ
  • ಇತರೆ ತೆರಿಗೆ: 2,607 ಕೋಟಿ ರೂ

ಭಾರತದಲ್ಲಿ ಎಲ್ಲಾ ರೀತಿಯ ತೆರಿಗೆ ಸಂಗ್ರಹ ಹೆಚ್ಚಾಗುತ್ತಿದೆ. ಜಿಎಸ್​ಟಿ ತೆರಿಗೆ ಕೂಡ ಒಳ್ಳೆಯ ಮೊತ್ತದಷ್ಟು ಸಂಗ್ರಹವಾಗುತ್ತಿದೆ. ತೆರಿಗೆಯಲ್ಲಿ ಪರೋಕ್ಷ ತೆರಿಗೆ ಮತ್ತು ನೇರ ತೆರಿಗೆ ಸೇರಿರುತ್ತದೆ. ನೇರ ತೆರಿಗೆಯು ವಹಿವಾಟಿನ ವೇಳೆಯೇ ಕಡಿತಗೊಳ್ಳುತ್ತದೆ. ಟಿಡಿಎಸ್ ಇತ್ಯಾದಿಯು ಇದಕ್ಕೆ ಉದಾಹರಣೆ. ಜಿಎಸ್​ಟಿ ಪರೋಕ್ಷ ತೆರಿಗೆಯಾಗಿದೆ.