ಬೆಳಗಾವಿ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಕೆ ಪಕ್ಷದ ಕೆಲವು ಮುಖಂಡರು ಕೂಡ ಕಾರಣ ಅಂತ ಸ್ವಪಕ್ಷೀಯರೇ ಆರೋಪಿಸುತ್ತಿದ್ದು, ಆತ್ಮಾವಲಕೋನ ಸಭೆಗಳಲ್ಲಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದೂ ಇದೆ. ಈ ನಡವೆ, ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನು ಪಕ್ಷದಿಂದ ಕೈಬಿಟ್ಟು ಲೋಕಸಭೆ ಚುನಾಚಣೆ ಮಾಡೋಣ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಾಜಿ ಮುಖ್ಯಮಂತ್ರಿ Basavaraj Bommai ಅವರಿಗೆ ಮನವಿ ಮಾಡಿದ್ದಾರೆ.
ಬೆಳಗಾವಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋತಿದ್ದಕ್ಕೆ ಶಾಸಕರು ಸೇರಿ ಎಲ್ಲರೂ ಅಧೈರ್ಯರಾಗಿದ್ದರು. ಕಾಂಗ್ರೆಸ್ ನಮಗಿಂತ ಕೇವಲ 12 ಲಕ್ಷ ವೋಟ್ ಹೆಚ್ಚು ಪಡೆದು ಅಧಿಕಾರಕ್ಕೆ ಬಂದಿದೆ. ಲೋಕಸಭಾ ಚುನಾವಣೆಯಲ್ಲಿ ಆ ವೋಟ್ ನಮ್ಮ ಕಡೆ ತಿರಿಗಿಸಿಕೊಳ್ಳಬಹುದು. ನಮ್ಮ ಜೊತಗೆ ಪ್ರಧಾನಿ ನರೇಂದ್ರ ಮೋದಿ ಅವರಂತಹ ನಾಯಕರಿದ್ದಾರೆ ಎಂದರು.
ಕೆಲವರು ಬಿಜೆಪಿಯಲ್ಲಿದ್ದುಕೊಂಡು ಬಲಿಷ್ಠರಾಗಿ ನಂತರ ನಮ್ಮವರನ್ನೇ ಸೋಲಿಸಿದ್ದಾರೆ. ರಾಮದುರ್ಗ, ಕಿತ್ತೂರಿನಲ್ಲಿ ಈ ರೀತಿ ನಮ್ಮವರನ್ನು ಸೋಲಿಸಿದ್ದಾರೆ. ಟಿಕೆಟ್ ಫೈನಲ್ ಆದ ಮೇಲೆ ಕೆಲವರು ವಿರೋಧ ಮಾಡುವ ಕೆಲಸ ಮಾಡಿದರು. ಕಾರ್ಯಕರ್ತರಿಗೆ ಈ ವಿಚಾರದಲ್ಲಿ ಬಹಳ ನೋವಾಗಿದೆ. ಒಂದು ಸೀಟ್ ಗೆಲ್ಲಿಸದವರನ್ನ ಕೋರ್ ಕಮಿಟಿಯಲ್ಲಿ ಇಟ್ಟುಕೊಳ್ಳಬೇಡಿ. ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನ ಕೈ ಬಿಟ್ಟು ಲೋಕಸಭೆ ಚುನಾವಣೆ ಮಾಡೋಣ ಎಂದರು.