ಮೈಸೂರು: ಕೇವಲ 485 ರೂ. ಹಣದ ಆಸೆಗಾಗಿ ವ್ಯಕ್ತಿಯೋರ್ವ ಇಬ್ಬರು ಕಾವಲುಗಾರರನ್ನು ಕೊಲೆ ಮಾಡಿದ ಘಟನೆ ಮೈಸೂರಿನ ಹುಣಸೂರಿನಲ್ಲಿನಡೆದಿದೆ.
ಹುಣಸೂರಿನ ಮಿಸ್ಬಾ ಸಾಮಿಲ್‌ನಲ್ಲಿ ಕೊಲೆ ನಡೆದಿದ್ದು, ಪ್ರಕರಣವನ್ನು ಬೇಧಿಸಿದ ಪೊಲೀಸರು ಆರೋಪಿ ಅಭಿಷೇಕ್ (26) ಎಂಬಾತನನ್ನು ಬಂಧಿಸಿದ್ದಾರೆ. ಈತ ಕೊಲೆ ನಡೆದ ಪಕ್ಕದ ಬೀದಿಯಲ್ಲಿ ವಾಸಿಸುತ್ತಿದ್ದು, ಹಣಕ್ಕಾಗಿ ವೆಂಕಟೇಶ್ (75) ಮತ್ತು ಷಣ್ಮುಖ (65) ಎಂಬ ಇಬ್ಬರು ಕಾವಲುಗಾರರಿಗೆ ರಾಡ್‌ನಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ.