ಕಾಂಗ್ರೇಸ್ ಸರ್ಕಾರದ ಮಹಾತ್ವಾಕಾಂಕ್ಷೇ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯು ಜೂನ್ 11, 20203 ರಂದು ರಾಜ್ಯಾದ್ಯಂತ ಅಭೂತಪೂರ್ವವಾಗಿ ಆರಂಭವಾಯ್ತು. ತಿಂಗಳಾಗುವ ಮೊದಲೇ ಸಾಕಷ್ಟು, ಏಳು, ಬೀಳುಗಳನ್ನು ಕಂಡಿದೆ, ಕಾಣುತ್ತಲೂ ಇದೆ. ಮಹಿಳೆಯರು ತಮ್ಮ ಶಕ್ತಿ ಏನು ಎಂಬುದನ್ನು ಈ “ಶಕ್ತಿ ಯೋಜನೆ” ಯಡಿಯಲ್ಲಿ, ಉಚಿತ ಬಸ್ ಪ್ರಯಾಣ ಮಾಡಿ ನಿರೂಪಿಸಿದ್ದಾರೆ. ಈ ಯೋಜನೆಯಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ದಿನೇ, ದಿನೇ ಹೆಚ್ಚುತ್ತಿದ್ದು, ಬಸ್ಸಿನಲ್ಲಿ ಹಿಂದೆಂದೂ ಕಾಣದಂತಹ ರಶ್, ನೂಕು-ನುಗ್ಗಲು, ಗದ್ದಲ, ಇವುಗಳದ್ದೇ ಹಾಡಾಗಿದೆ. ಬರೀ ಇವಿಷ್ಟೇ ಆಗಿದ್ದರೆ ಏನು ಆಗ್ತಿರಲಿಲ್ಲಾ . ರಾಜ್ಯದಾದ್ಯಂತ ಬಸ್ ಪ್ರಯಾಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಹೊಸ ಸಮಸ್ಯೆಗಳು, ರಾದ್ಧಾಂತಗಳು ನಡೆಯುತ್ತಿವೆ. ಇನ್ನು ನಮ್ಮ ಉ.ಕ ಜಿಲ್ಲೆಯಂತೂ ಕೇಳಲೇಬೇಡಿ, ಜಿಲ್ಲೆಯ ಯಾವ ಬಸ್ ನೋಡಿದ್ರು ಕೂಡ ಫುಲ್ ರಶ್. ಮೊದಲು ಎಲ್ಲೋ ಒಂದ ಕಡೆ ನೂಕುನುಗ್ಗಲು ಉಂಟಾಗ್ತಿತ್ತು. ಆದ್ರೆ ಸಾಮಾನ್ಯವಾಗಿ ಎಲ್ಲಾ ಬಸ್‌ಗಳದ್ದು ಇದೇ ಪರಿಸ್ಥಿತಿ. ಇವೆಲ್ಲಾ ರಾದ್ಧಾಂತ, ಗಲಾಟೆ ಹಾಗೂ ಸಮಸ್ಯೆಗಳು, ಈ ಯೋಜನೆ ಜಾರಿಗೆ ಮೊದಲು ಇರಲಿಲ್ಲ..
ಒಟ್ಟಿನಲ್ಲಿ ಈ ಯೋಜನೆ ಸಾಕಪ್ಪ ಸಾಕು ಅನ್ನೋ ಪರಿಸ್ಥಿತಿ ಎದುರಾಗಿದೆ. ಮೊದಲೇ ಆರ್ಥಿಕ ಸಂಕಷ್ಟದಲ್ಲಿರೋ ಸಾರಿಗೆ ಸಂಸ್ಥೆಗೆ ಮುಂದೆನು ಸಮಸ್ಯೆ ಉಂಟಾಗುತ್ತೋ ಅನ್ನೋದನ್ನು ಕಾದು ನೋಡಬೇಕಿದೆ…
ಮನು ವೈದ್ಯ ನುಡಿಸಿರಿ ನ್ಯೂಸ್ ಕುಮಟಾ