ಧಾರವಾಡ: ಯೋಗ ಧ್ಯಾನದಿಂದ ಸಾಧನೆ ಸಾಧ್ಯ. ಮನಸ್ಸು ಮತ್ತು ದೇಹದ ಆರೋಗ್ಯಕ್ಕಾಗಿ ಯೋಗ ಉತ್ತಮ ಸಾಧನೆಯಾಗಿದೆ ಎಂದು ಧಾರವಾಡ ಪಾಟೀಲ್ಸ್ ಗುರುಕುಲ ಕರಿಯರ್ ಅಕಾಡೆಮಿ ನಿರ್ದೇಶಕರಾದ ಶ್ರೀ ಎನ್.ಎಂ.ಪಾಟೀಲ ಹೇಳಿದರು.
ಧಾರವಾಡದ ಭಾರತಿ ನಗರದ ಲಿಂಗರಾಜ ಬಾಯ್ಸ್ ಹಾಸ್ಟೆಲ್ ಪಕ್ಕದ ದಾಸನಕೊಪ್ಪ ಸರ್ಕಲ್ನ ಪಟ್ಟಣಶೆಟ್ಟಿ ಕಲ್ಯಾಣ ಮಂಟಪ ಎದುರು ಬುಧವಾರ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಹಾರ್ಟ್‌ಲೈಸ್ ಧ್ಯಾನ ತರಬೇತಿ ಸಂಸ್ಥೆಯ ಮತ್ತು ಸಂಸ್ಕೃತಿ ಸಚಿವಾಲಯ ಮತ್ತು ಗುರುಕುಲ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಉಚಿತ ಯೋಗ ಮಹೋತ್ಸವ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮನುಷ್ಯನ ಮನಸ್ಸು ಚಂಚಲತೆಯಿಂದ ಕೂಡಿದ್ದು, ಚಂಚಲತೆಯಿಂದ ಕೂಡಿದ ಮನಸ್ಸಿನಿಂದ ಸಾಧನೆ ಅಸಾಧ್ಯ. ಮನಸ್ಸಿನ ಚಂಚಲತೆ ಹೊಗಲಾಡಿಸಿ, ಸ್ಥಿರತೆಯಿಂದ ಸಾಧನೆ ಸಾಧ್ಯವಾಗುತ್ತದೆ ಎಂದರು.
ಹಾರ್ಟ್ ಮಸ್ ಸಂಸ್ಥೆಯ ಧಾರವಾಡ ಶಹರದ ಸಂಚಾಲಕರಾದ ಶ್ರೀಧರ ಚಕ್ರವರ್ತಿ ಮಾತನಾಡಿ, ಧ್ಯಾನ ಮತ್ತು ಯೋಗದಿಂದ ಉತ್ತಮ, ಆರೋಗ್ಯ, ಆಯಸ್ಸು ದೊರಕುವುದೆಂದು ಉತ್ತಮ ಸಮಾಜ ಕಟ್ಟಲು ಸಾಧ್ಯವಾವೆಂದರು. ಯೋಗ ಮನಸ್ಸನ್ನು ಮನವೇತನಗೊಳಿಸಿ, ವ್ಯಕ್ತಿಯ ಹೃದಯ ಹಗುರಗೊಳಿಸುತ್ತದೆ. ಪರಿಣಾಮ ಅಂತರಂಗ ಬಹಿರಂಗ ಶುದ್ಧವಾಗುತ್ತದೆ. ಹೀಗಾಗಿ ಯೋಗ ಮತ್ತು ಧ್ಯಾನ ಈ ಒತ್ತಡದ ಜೀವನಕ್ಕೆ ಅತಿ ಅವಶ್ಯಕ ಎಂದು ಹೇಳಿದರು.
ಧಾರವಾಡದ ಜನಪ್ರಿಯ ಹೊಮಿಯೋಪತಿಕ್ ವೈದ್ಯರಾದ ಡಾ.ಸಂತೋಷ್ ಮಠಪತಿ ಬದುಕಿನಲ್ಲಿ ಭೋಗ ಕಡಿಮೆಯಾದರೆ, ಅದೇ ಯೋಗ ಎಂದರು.
ಪಾಟೀಲ್ಸ್ ಗುರುಕುಲ, ಕರಿಯರ್ ಅಕಾಡೆಮಿಯ ಕೆ.ಎಸ್.ಪಾಟೀಲ, ಜಿ.ಆರ್.ಪಾಟೀಲ, ಶ್ರೀಮತಿ ನಂದಾ ಅಚಲಕರ್, ಗುರುರಾಜ ಕ್ಯಾಸತಿ, ಆಶಾ ಚಿತ್ರ ಮತ್ತು 700 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಸಂಸ್ಥೆಯ ಉಪನ್ಯಾಸಕರಾದ ಈಶ್ವರ ಬೆಟದೂರ ನಿರೂಪಿಸಿದರು. ಗಿರೀಶ್ ಹೊಸಮನಿ ಸ್ವಾಗತಿಸಿದರು ಮತ್ತು ಶಿವಕುಮಾರ ಆರ್.ಸಿ. ವಂದಿಸಿದರು.