ಭಟ್ಕಳದಲ್ಲಿ ಭಯ ಬೀದಿ ನಾಯಿಗಳ ಅಟ್ಟಹಾಸ – ಒಂದೇ ದಿನಕ್ಕೆ ಹತ್ತು ಜನರ ಮೇಲೆ ದಾಳಿ

ಭಟ್ಕಳದಲ್ಲಿ ಬೀದಿ ನಾಯಿಗಳ ಅಟ್ಟಹಾಸ ಜೋರಾಗಿದೆ. ಮಂಗಳವಾರ ಬೀದಿ ನಾಯಿಗಳು ಕಂಡ ಕಂಡ ಕಡೆಗಳಲ್ಲಿ ದಾರಿಹೋಕರ ಮೇಲೆ ದಾಳಿ ನಡೆಸಿವೆ. ಆಘಾತಕಾರಿ ವಿಚಾರ ಏನು ಅಂದ್ರೆ, ಒಂದೇ ದಿನದಲ್ಲಿ ಹತ್ತಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿವೆ…



ಮದೀನಾ ಕಾಲೋನಿಯಲ್ಲಿ ಹುಚ್ಚು ನಾಯಿಯೊಂದು ಐದು ಜನರ ಮೇಲೆ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದ್ದು, ಇದು ಹುಚ್ಚು ನಾಯಿನೋ ಅಥವಾ ಬೀದಿ ನಾಯಿನೋ ಎಂಬುದು ಖಚಿತವಾಗಿಲ್ಲ. ಅಲ್ಲದೆ ಹೆಬಳೆ ಪಂಚಾಯತ್ ವ್ಯಾಪ್ತಿಯ ಹಡೀನ್‌ನಲ್ಲಿ ಇಬ್ಬರು, ಸರ್ಪನಕಟ್ಟೆಯಲ್ಲಿ ಇಬ್ಬರಿಗೆ ಹಾಗೂ ಬದ್ರಿಯಾ ಕಾಲೋನಿಯಲ್ಲಿ ಒಬ್ಬರಿಗೆ ನಾಯಿ ಕಚ್ಚಿದೆ..



ನಾಯಿ ದಾಳಿಗೆ ಒಳಗಾದವರನ್ನು ಜೀವನ್ ನಾಯ್ಕ, ಮುಹಮ್ಮದ್ ಇದ್ರೀಸ್, ಫಿರ್ದೊಸ್ ಬಾನು, ಮುಹಮ್ಮದ್ ಫಾರೂಖ್, ಫರಿದಾ ಬಾನು ಜಾಲಿ, ಕೌಸರ್ ಮದೀನಾ ಕಾಲೋನಿ, ಮುಹಮ್ಮದ್ ಇರ್ಷಾದ್, ಮುಹಮ್ಮದ್ ಅನ್ಸಾರ್, ಅಂಜುಮ್ ಎಂದು ಗುರುತಿಸಲಾಗಿದೆ..
ನಾಯಿ ದಾಳಿ ಸುದ್ದಿಗೆ ಭಟ್ಕಳದ ಜನರು ಭಯಬೀತರಾಗಿದ್ದು ಒಂದೇ ದಿನದಲ್ಲಿ ಹತ್ತಕ್ಕು ಹೆಚ್ಚು ಜನರ ಮೇಲೆ ನಾಯಿ ದಾಳಿ ನಡೆಸಿದ್ದು ಇದು ಹುಚ್ಚು ನಾಯಿಗಳ ಹಾವಳಿ ಆಗಿರಬಹುದು ಎಂದು ಅನುಮಾನಿಸಲಾಗಿದೆ…

ಉದಯ ನಾಯ್ಕ, ನುಡಿ ಸಿರಿ ನ್ಯೂಸ್‌, ಭಟ್ಕಳ್‌