ಸಿಲಿಕಾನ್ ಸಿಟಿ ಈಗ ಸೇಫ್ ಸಿಟಿ: ಬೆಂಗಳೂರಿನ ಜನರ ಸಹಾಯಕ್ಕೆ ಬಂತು ತುರ್ತು ಸಹಾಯವಾಣಿ

ಬೆಂಗಳೂರು: ಸಿಲಿಕಾನ್ ಸಿಟಿ ಈಗ ಸೇಫ್ ಸಿಟಿಯತ್ತ ಬದಲಾವಣೆಗೊಳ್ಳುತ್ತಿದ್ದು, ಬೆಂಗಳೂರಿನ ಜನರ ಸಹಾಯಕ್ಕೆ ಎಮರ್ಜೆನ್ಸಿ ಸೇವೆಯನ್ನು ಜಾರಿ ತರಲಾಗುತ್ತಿದೆ. ಸಿಲಿಕಾನ್​ ಸಿಟಿಯಲ್ಲಿ ತುರ್ತು ಸಹಾಯವಾಣಿ ಸೇವೆ ಆರಂಭವಾಗಿವೆ. ಹಾಗಾಗಿ ನಗರ ವಾಸಿಗಳ ರಕ್ಷಣೆಗೆ ಸಿಲಿಕಾನ್ ಸಿಟಿ ಪೊಲೀಸರು ನೂತನ ಪ್ಲಾನ್​ ಮಾಡಿದ್ದಾರೆ. ನಗರದಲ್ಲಿ ಪೊಲೀಸರಿಂದ ತುರ್ತು ಸಹಾಯ ನಿರ್ಮಾಣ ಮಾಡಿದ್ದು, ತುರ್ತು ಸಹಾಯವಾಣಿ ಉಪಯೋಗದಿಂದ ಮಹಿಳೆಯರು ನಿಂತ ಸ್ಥಳದಿಂದಲೇ ಪೊಲೀಸರಿಗೆ ಮಾಹಿತಿ ನೀಡಬಹುದಾಗಿದೆ.

ಒಂದು ಬಟನ್ ಪ್ರೆಸ್ ಮಾಡಿದರೆ ಸಾಕು ನಿಮ್ಮ ಸುತ್ತಮುತ್ತ ವಿಡಿಯೋ ಸಮೇತ ರೆಕಾರ್ಡ್ ಆಗತ್ತೆ. ನೇರವಾಗಿ ಕಮಾಂಡ್ ಸೆಂಟರ್​ಗೆ ಕರೆ ಹೋಗುವ ಮೂಲಕ ಮಾಹಿತಿ ಕಲೆ ಹಾಕಲಾಗುತ್ತದೆ. ನಂತರ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗುತ್ತದೆ.

7 ನಿಮಿಷಕ್ಕೆ ಹೋಯ್ಸಳ ಪೊಲೀಸರು ಸ್ಥಳಕ್ಕೆ ಆಗಮಿಸುತ್ತಾರೆ. ಬೆಂಗಳೂರಿನಾದ್ಯಂತ 30 ಕಡೆ ಈ ತುರ್ತು ಸಹಾಯವಾಣಿ ಇನ್ಸ್ಟಾಲೇಷನ್​ ಮಾಡಲಾಗಿದ್ದು, ಮೊಬೈಲ್ ಬಳಕೆ ಇಲ್ಲದವರಿಗೆ ಇದು ಉಪಯೋಗವಾಗಲಿದೆ.

ತುರ್ತು ಸಹಾಯವಾಣಿ ಬಾಕ್ಸ್‌ಗಳನ್ನು ದುರ್ಬಲ ಪ್ರದೇಶಗಳಲ್ಲಿ ಅಳವಡಿಸಲಾಗುತ್ತಿದೆ. ಇಲ್ಲಿಯವರೆಗೆ ಮೊದಲ ಹಂತದಲ್ಲಿ ಅಶೋಕನಗರ, ಜನನಭಾರತಿ ಕ್ಯಾಂಪಸ್, ಐಒಸಿ ವೃತ್ತ, ರಸೆಲ್ ಮಾರುಕಟ್ಟೆ, ಮಾರೇನಹಳ್ಳಿ ಸೇರಿದಂತೆ ಇತರೆಡೆ ತುರ್ತು ಸಹಾಯವಾಣಿ ಬಾಕ್ಸ್‌ಗಳನ್ನು ಅಳವಡಿಸಲಾಗಿದೆ

ಈ ಯೋಜನೆಯ ಭಾಗವಾಗಿ, 7,500 ಸಿಸಿಟಿವಿಗಳನ್ನು ಸ್ಥಾಪಿಸುವ ಗುರಿ ಕೂಡ ಇದೆ. ಅದರಲ್ಲಿ ಸುಮಾರು 4,000 ಈಗಾಗಲೇ ಅಳವಡಿಸಲಾಗಿದೆ. ಇದಲ್ಲದೆ, ಪೊಲೀಸ್ ಇಲಾಖೆಯು ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವ ವ್ಯವಸ್ಥೆ, ಮುಖ ಗುರುತಿಸುವ ವ್ಯವಸ್ಥೆ, ಅಪರಾಧ ವಿಶ್ಲೇಷಣೆ ವ್ಯವಸ್ಥೆ, ಮೊಬೈಲ್ ಕಮಾಂಡ್ ಸೆಂಟರ್ ಮತ್ತು ಆಪರೇಟಿಂಗ್ ಡ್ರೋನ್‌ಗಳನ್ನು ಹಂತ ಹಂತವಾಗಿ ಹೊರತರಲಿದೆ.

ಹನಿವೆಲ್ ಆಟೋಮೇಷನ್ ಇಂಡಿಯಾ ಲಿಮಿಟೆಡ್ 2021 ರಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಬೆಂಗಳೂರನ್ನು ಮಹಿಳೆಯರಿಗೆ ಸುರಕ್ಷಿತ ನಗರವನ್ನಾಗಿ ಮಾಡಲು 496.67 ಕೋಟಿ ರೂ. ಪೊಲೀಸ್ ಯೋಜನೆಯನ್ನು ಅನುಷ್ಠಾನಗೊಳಿಸುವ ಗುತ್ತಿಗೆಯನ್ನು ಪಡೆದುಕೊಂಡಿತ್ತು.