ಮಂಗಳೂರು-ಬೆಂಗಳೂರು ನಡುವೆ ಮೂರು ವಿಶೇಷ ರೈಲು ಸಂಚಾರ.!

ಮಂಗಳೂರು: ಪ್ರಯಾಣಿಕರ ದಟ್ಟಣೆ ನಿರ್ವಹಿಸುವ ದೃಷ್ಟಿಯಿಂದ ಮಂಗಳೂರು ಸೆಂಟ್ರಲ್ ಮತ್ತು ಬೆಂಗಳೂರು ಸಿಟಿ ಜಂಕ್ಷನ್ ನಡುವೆ ಮೈಸೂರು ಮಾರ್ಗದ ಮೂಲಕ ವಿಶೇಷ ರೈಲು ಸಂಚರಿಸಲಿದೆ. ಜುಲೈ 26 ರಿಂದ ಆಗಸ್ಟ್ 31 ರ ತನಕ ವಾರದಲ್ಲಿ ಮೂರು ದಿನ ವಿಶೇಷ ರಾತ್ರಿ ರೈಲು ಸೇವೆಗೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.

ಮಂಗಳೂರು ಮತ್ತು ಬೆಂಗಳೂರು ಸಂಪರ್ಕಿಸುವ ಶಿರಾಡಿ ಘಾಟ್ ಮಾರ್ಗ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಹೀಗಾಗಿ ಈ ಮಾರ್ಗದಲ್ಲಿ ಹೆಚ್ಚುವರಿ ರೈಲಿನ ಅವಶ್ಯಕತೆ ತುಂಬಾ ಇದೆ ಎಂದು ಪಶ್ಚಿಮ ಕರಾವಳಿ ರೈಲು ಯಾತ್ರಾ ಅಭಿವೃದ್ಧಿ ಸಮಿತಿ ರೈಲ್ವೆ ಮಂಡಳಿಗೆ ಮನವಿ ಮಾಡಿತ್ತು. ಅದಕ್ಕೆ ಸ್ಪಂದಿಸಿದ ರೈಲ್ವೆ ಮಂಡಳಿ ಹೆಚ್ಚುವರಿ ರೈಲನ್ನು ಒದಗಿಸಿದೆ.

ಯಾವ ದಿನ ಸಂಚಾರ?

06548 ನಂಬರ್‌ನ ರೈಲು ಮಂಗಳೂರಿನಿAದ ಬೆಂಗಳೂರು ನಗರಕ್ಕೆ ಜುಲೈ 27 ರಿಂದ ಆ.31 ರ ತನಕ ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರ ಸಂಚರಿಸಲಿದೆ. ಬೆಂಗಳೂರಿನಿAದ ಮಂಗಳೂರಿಗೆ ಜುಲೈ 26ರಿಂದ ಆಗಸ್ಟ್ 30ರ ತನಕ ಪ್ರತಿ ಭಾನುವಾರ, ಮಂಗಳವಾರ ಮತ್ತು ಗುರುವಾರ 06547 ನಂಬರಿನ ರೈಲು ಸಂಚರಿಸಲಿದೆ.

ಬೆಂಗಳೂರಿನಿಂದ ರಾತ್ರಿ 8.30ಕ್ಕೆ ಹೊರಡಲಿರುವ ಹೊಸ ರೈಲು ವಿವಿಧ ನಿಲ್ದಾಣಗಳಿಗೆ ತಲುಪುವ ಸಮಯ ಹೀಗಿದೆ.
ಕೆಂಗೇರಿ- ರಾತ್ರಿ 8.49
ರಾಮನಗರ- ರಾತ್ರಿ 9.13
ಚನ್ನರಾಯಪಟ್ಟಣ- ರಾತ್ರಿ 9.24
ಮಂಡ್ಯ- ರಾತ್ರಿ 9.54
ಮೈಸೂರು ಜಂಕ್ಷನ್- ರಾತ್ರಿ 11
ಕೃಷ್ಣರಾಜನಗರ- ರಾತ್ರಿ 11.49
ಹೊಳೆನರಸಿಪುರ- ರಾತ್ರಿ 12.43
ಹಾಸನ- ರಾತ್ರಿ 1.35
ಸಕಲೇಶಪುರ- ಬೆಳಗಿನಜಾವ 3
ಸುಬ್ರಹ್ಮಣ್ಯ ರೋಡ್- ಬೆಳಗ್ಗೆ 6.10
ಕಬಕಪುತ್ತೂರು- ಬೆಳಗ್ಗೆ 7
ಬಂಟ್ವಾಳ- ಬೆಳಗ್ಗೆ 7.30
ಪಡೀಲ್- ಬೆಳಗ್ಗೆ 8.25
ಮಂಗಳೂರು ಸೆಂಟ್ರಲ್- ಬೆಳಗ್ಗೆ 9.05

ಮಂಗಳೂರಿನಿಂದ ಸಂಜೆ 6.35ಕ್ಕೆ ಹೊರಡುವ ರೈಲು ವಿವಿಧ ನಿಲ್ದಾಣಗಳಿಗೆ ತಲುಪುವ ಸಮಯ ಹೀಗಿದೆ.
ಮಂಗಳೂರು ಜಂಕ್ಷನ್- ಸಂಜೆ 6.48
ಪಡೀಲ್- ಸಂಜೆ 7.10
ಬಂಟ್ವಾಳ- ಸಂಜೆ 7.20
ಕಬಕಪುತ್ತೂರು- ಸಂಜೆ 7.48
ಸುಬ್ರಹ್ಮಣ್ಯ ರೋಡ್- ರಾತ್ರಿ 8.40
ಸಕಲೇಶಪುರ- ರಾತ್ರಿ 9.20
ಹಾಸನ- ಮಧ್ಯರಾತ್ರಿ 12.25
ಹೊಳೆನರಸಿಪುರ- ಮಧ್ಯರಾತ್ರಿ 1.13
ಕೃಷ್ಣರಾಜನಗರ- ರಾತ್ರಿ 2.08
ಮೈಸೂರು ಜಂಕ್ಷನ್- ಬೆಳಗಿನ ಜಾವ 3
ಮಂಡ್ಯ- ಬೆಳಗಿನ ಜಾವ 3.54
ಚನ್ನರಾಯಪಟ್ಟಣ- ಬೆಳಗಿನಜಾವ 4.30
ರಾಮನಗರ- ಬೆಳಗಿನಜಾವ 4.42
ಕೆಂಗೇರಿ- ಬೆಳಗಿನಜಾವ 5.11
ಬೆಂಗಳೂರು ಸಿಟಿ ಜಂಕ್ಷನ್- ಬೆಳಗ್ಗೆ 6.15