ಸೇನಾ ಲಘು ವಿಮಾನ ಪತನ: ಇಬ್ಬರು ಸೇನಾ ಸಿಬ್ಬಂದಿ ಸೇರಿ ಮೂವರು ಬಲಿ

ಮಾರ್ಸಿಲ್ಲೆ: ದಕ್ಷಿಣ ಫ್ರಾನ್ಸ್‌ನ ಗುಡ್ಡಗಾಡು ಪ್ರದೇಶದಲ್ಲಿ ಲಘು ವಿಮಾನವೊಂದು ಪತನಗೊಂಡಿದ್ದು, ಇಬ್ಬರು ಸೇನಾ ಸಿಬ್ಬಂದಿ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ ಎಂದು ಫ್ರಾನ್ಸ್‌ ಸೇನೆ ಮತ್ತು ಪ್ರಾದೇಶಿಕ ಪ್ರಾಸಿಕ್ಯೂಟರ್ ತಿಳಿಸಿದ್ದಾರೆ. ದಕ್ಷಿಣ ಫ್ರಾನ್ಸ್‌ನ  ಗೊನ್‌ಫರಾನ್ ಗ್ರಾಮದ ಸಮೀಪ ಈ ಅಪಘಾತ ಸಂಭವಿಸಿದ್ದು, ಅಪಘಾತಕ್ಕೆ ಕಾರಣ ಏನು ಎಂಬ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಫ್ರಾನ್ಸ್‌ನ  ಎಂದು ಪ್ರಾದೇಶಿಕ ಪ್ರಾಸಿಕ್ಯೂಟರ್ ಪ್ಯಾಟ್ರಿಸ್ ಕ್ಯಾಂಬರೌ ಸುದ್ದಿಸಂಸ್ಥೆ ಎಎಫ್‌ಪಿಗೆ ಹೇಳಿದ್ದಾರೆ. 

ಘಟನಾ ಸ್ಥಳಕ್ಕೆ ಅಪರಾಧ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಫ್ರೆಂಚ್ ಸೇನೆಯ ದಕ್ಷಿಣ ಕಮಾಂಡ್ ಪ್ರಕಾರ, ಮೃತ ಮೂವರು  ಯೋಧರ ಪೈಕಿ ಇಬ್ಬರು ಹತ್ತಿರದ 2ನೇ ಯುದ್ಧ ಹೆಲಿಕಾಪ್ಟರ್ ರೆಜಿಮೆಂಟ್ ತರಬೇತಿ ನೆಲೆಯಲ್ಲಿ  ಸೈನಿಕರಾಗಿದ್ದರು.  ಹೆಲಿಕಾಪ್ಟರ್ ಅವಘಡದಿಂದಾಗಿ ಅದು ಬಿದ್ದ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಅಗ್ನಿ ಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿವೆ. ವಾಟರ್ ಬಾಂಬಿಂಗ್ ಹೆಲಿಕಾಪ್ಟರ್‌ಗಳ ಸಹಾಯದಿಂದ ವಿಮಾನ ಬಿದ್ದ ಸ್ಥಳವನ್ನು ಗುರುತಿಸಲಾಗಿತ್ತು ಎಂದು ತಿಳಿದು ಬಂದಿದೆ. 

ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ ಭೂಕಂಪ ಇಡೀ ವಿಶ್ವವನ್ನೇ ದುಃಖ ಸಾಗರದಲ್ಲಿ ಮುಳುಗಿಸಿತ್ತು. ಭೂಕಂಪ ಸ್ಥಳದ ಫೋಟೋ ವಿಡಿಯೋಗಳು ಪ್ರತಿಯೊಬ್ಬರ ಕಣ್ಣಲ್ಲಿ ನೀರು ಜಿನುಗಿಸುತ್ತಿದ್ದವು  5,000ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡ ಈ ದುರಂತದ ಬೆನ್ನಲ್ಲೇ ಟರ್ಕಿಗೆ ಭಾರತ ಸಹಾಯಹಸ್ತ ಚಾಚಿತ್ತು. ಭಾರತದ ನಿರ್ಧಾರದ ಬೆನ್ನಲ್ಲೇ ಪರಿಹಾರ ಸಾಮಾಗ್ರಿ, ಔಷಧಿಗಳು, NDRF ರಕ್ಷಣಾ ತಂಡ, ಡ್ರಿಲ್ಲಿಂಗ್ ಮಿಶನ್ ಸೇರಿದಂತೆ ಹಲವು ವಸ್ತುಗಳನ್ನು ಹೊತ್ತ ಭಾರತೀಯ ವಾಯುಸೇನಾ ವಿಮಾನ ಟರ್ಕಿಗೆ ಪ್ರಯಾಣ ಬೆಳೆಸಿತ್ತು. ಆದರೆ ಟರ್ಕಿಗೆ ಹೊರಟ ಭಾರತೀಯ ವಾಯುಸೇನಾ ವಿಮಾನಕ್ಕೆ ಪಾಕಿಸ್ತಾನ ವಾಯುಪ್ರದೇಶ ಬಳಸದಂತೆ ತಾಕೀತು ಮಾಡಿದ ಘಟನೆ ನಡೆದಿತ್ತು. 

ಭಾರತದ ಅತೀ ದೊಡ್ಡ ಕಾರ್ಗೋ ವಿಮಾನ(Indian Airforce C-17) ಬೋಯಿಂಗ್ C-17 ಗ್ಲೋಬ್‌ಮಾಸ್ಟರ್  ವಿಮಾನಕ್ಕೆ ಪಾಕಿಸ್ತಾನ(Pakistan Airspance) ಪ್ರವೇಶ ನಿರ್ಬಂಧಿಸಿದ ಘಟನೆ ನಡೆದಿತ್ತು. ಪಾಕಿಸ್ತಾನ ವಾಯಪ್ರದೇಶ ಬಳಕೆಗೆ ಅನುಮತಿ ನೀಡಿಲ್ಲ. ಇದರ ಪರಿಣಾಮ ಭಾರತ ಪರಿಹಾರ(India Relief Plane) ವಿಮಾನ ಸುತ್ತಿ ಬಳಸಿ ಪ್ರಯಾಣ ಮಾಡಬೇಕಾಗಿ ಬಂದಿತ್ತು. ನಂತರ ಭಾರತೀಯ ವಾಯುಸೇನಾ ವಿಮಾನ ಟರ್ಕಿಯ(Turkey) ಅಡಾನ ವಿಮಾನ ನಿಲ್ದಾಣದಲ್ಲಿ ಇಳಿದಿದೆ. ಭೂಕಂಪ(Turkey Earthquake) ಸಂಭವಿಸಿದ ಪ್ರದೇಶದಲ್ಲಿದ್ದ ಬಹುತೇಕ ವಿಮಾನ ನಿಲ್ದಾಣಗಳು ನೆಲಸಮಗೊಂಡಿದೆ. ಹೀಗಾಗಿ ಹತ್ತಿರದ ಅಡಾನ ವಿಮಾನ ನಿಲ್ದಾಣದಲ್ಲಿ ಭಾರತದ ವಿಮಾನ ಲ್ಯಾಂಡ್ ಆಗಿದೆ.

ಮಾನವೀಯ ನೆಲೆಗಟ್ಟಿನಲ್ಲಿ ಭಾರತ ಯಾವುದೇ ದೇಶಕ್ಕೆ ಸಹಾಯ ಹಸ್ತ ಚಾಚಿದಾಗ ಪಾಕಿಸ್ತಾನ ವಾಯುಪ್ರದೇಶ ನಿರಾಕರಿಸಿದ ಘಟನೆ ಸಾಕಷ್ಟಿವೆ. ಯೂರೋಪಿಯನ್ ರಾಷ್ಟ್ರಗಳು, ಟರ್ಕಿ, ಉಕ್ರೇನ್‌ಗೆ ತೆರಳಲು ಭಾರತಕ್ಕಿರುವ ನೇರ ಮಾರ್ಗ ಪಾಕಿಸ್ತಾನ ದಾಟಿ ಸಾಗುವುದು. ಆದರೆ ಉಕ್ರೇನ್, ಇದೀಗ ಟರ್ಕಿ ಸೇರಿದಂತೆ ಈ ಹಿಂದಿನ ಹಲವು ಘಟನೆಗಳಲ್ಲಿ ಪಾಕಿಸ್ತಾನ ಸರ್ಕಾರ ಭಾರತಕ್ಕೆ ವಾಯುಪ್ರದೇಶ ಬಳಕೆಯನ್ನು ನಿಷೇಧಿಸಿದೆ.  ಭಾರತೀಯ ವಾಯು ಸೇನೆಗೆ ಪಾಕಿಸ್ತಾನ ಅನುಮತಿ ನಿರಾಕರಿಸಿದ ಕಾರಣ ಸುತ್ತಿಬಳಸಿ ಟರ್ಕಿ ತಲಪಿತ್ತು.