ಕುಮಟಾ ತಾಲೂಕಿನ ಕತಗಾಲ್ ಸಮೀಪವಿರುವ ದೇವಿಮನೆ ಘಟ್ಟದಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ

ಕುಮಟಾ : ತಾಲೂಕಿನ ಕತಗಾಲ್ ಸಮೀಪವಿರುವ ದೇವಿಮನೆ ಘಟ್ಟದಲ್ಲಿ ಸುಮಾರು 25-30 ವಯಸ್ಸಿನ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ. ಮಾಹಿತಿ ತಿಳಿದ ಕುಮಟಾ ಠಾಣೆ ಫೋಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮಹಿಳೆ ಗುರುತು ಪತ್ತೆ ಹಚ್ಚಲು ಪ್ರಯತ್ನಿಸಿದ್ದಾರೆ. ಈ ವೇಳೆ ಮಹಿಳೆ ಕೈ ಮೇಲೆ ಭರತ್, ಲೋಹಿತ್, ಸಮರ್ಥ್ ಎಂಬ ಹಚ್ಚೆ ಇರುವುದು ಪತ್ತೆಯಾಗಿದೆ. ಇವಳ ಗುರುತು ಸಿಕ್ಕವರು ಕುಮಟಾ ಪೋಲೀಸ್ ಠಾಣೆ ನಂಬರ್ 9480805234 ಗೆ ತಿಳಿಸಲು ಪೋಲೀಸರು ಮನವಿ ಮಾಡಿದ್ದಾರೆ…

ಮನು ವೈದ್ಯ, ನುಡಿ ಸಿರಿ ನ್ಯೂಸ್‌, ಕುಮಟಾ