ಆಗಸ್ಟ್ 18 ರಂದು ಗೃಹಲಕ್ಷ್ಮಿಯರ ಖಾತೆಗೆ ಹಣ: ಲಕ್ಷ್ಮಿ ಹೆಬ್ಬಾಳ್ಕರ್

ಚಿಕ್ಕಮಗಳೂರು: ರಾಜ್ಯದಲ್ಲಿ ಗೃಹ ಲಕ್ಷ್ಮಿ ಯೋಜನೆ ಮತ್ತಷ್ಟು ವಿಳಂಬವಾಗಿದ್ದು, ಆಗಸ್ಟ್ 18 ರಂದು ಗೃಹಲಕ್ಷ್ಮಿಯರ ಖಾತೆಗೆ ಹಣ ನೀಡಲಾಗುವುದು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ಕೊಪ್ಪ ತಾಲೂಕಿನ ಗೌರಿಗದ್ದೆ ದತ್ತಾಶ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪ್ಲಿಕೇಶನ್ ಹಾಕಲು ಮತ್ತಷ್ಟು ವಿಳಂಬ ಆಗಲಿದೆ. ಆಗಸ್ಟ್ 17 ಅಥವಾ 18ಕ್ಕೆ ಖಂಡಿತಾ ಹಣ ಅವರ ಖಾತೆ ಸೇರುತ್ತೆ. ಯೋಜನೆಯ ಬದಲಾವಣೆಯಿಂದ ವಿಳಂಬವಾಗುತ್ತಿದೆ ಅಷ್ಟೇ ಎಂದು ವಿವರಿಸಿದ್ದಾರೆ.

ಗೃಹ ಲಕ್ಷ್ಮಿ ಯೋಜನೆ ಜನರಿಗೆ ಸರಳವಾಗಿ ಸಿಗಬೇಕು. ಹಾಗಾಗಿ ಅಧಿಕಾರಿಗಳಿಗೆ ಕೆಲ ಬದಲಾವಣೆಗಳ ಸೂಚನೆ ನೀಡಿದ್ದೇವೆ. ಗ್ರಾಮ 1 ಕರ್ನಾಟಕ, ಬೆಂಗಳೂರು 1 ನಲ್ಲಿ ಇದರ ಸೇವೆ ಲಾಭ ಪಡೆಯಬಹುದಾಗಿತ್ತು. ಈಗ ಬಾಪೂಜಿ ಸೇವಾ ಕೇಂದ್ರವನ್ನು ಸೇರಿಸಿದ್ದೇವೆ ಎಮದು ತಿಳಿಸಿದರು.

 ಗ್ರಾಮ ಪಂಚಾಯಿತಿಗಳಲ್ಲಿ ಬಾಪೂಜಿ ಸೇವಾ ಕೇಂದ್ರ ಇದೆ. ಸರ್ಕಾರದ ಯೋಜನೆಗಳನ್ನ ಜನರ ಮನೆ ಬಾಗಿಲಿಗೆ ತಲುಪಿಸುವ ಆಸಕ್ತಿ ಇರೋರಿಗೆ ಪ್ರಜಾಪ್ರತಿನಿಧಿ ಮಾಡುತ್ತೇವೆ. ಅವರಿಗೆ ಯಾವ ಖಾತೆಗೆ ಬೇಕೋ ಅದೇ ಅಕೌಂಟ್ ಗೆ ಹಣ ನೀಡುತ್ತೇವೆ. ಶುಕ್ರವಾರ ಕೆಲವು ಬದಲಾವಣೆ ಮಾಡಿದ್ದೇವೆ, ಅಧಿಕಾರಿಗಳು ಈಗಾಗಲೇ ಸಾಫ್ಟ್‍ವೇರ್ ರೆಡಿ ಮಾಡುತ್ತಿದ್ದಾರೆ. ಅತಿ ಶೀಘ್ರದಲ್ಲಿ ಅಪ್ಲಿಕೇಶನ್ ಡೌನ್ಲೋಡ್ ಮಾಡುವ ಯೋಜನೆಗೆ ಚಾಲನೆ ನೀಡುತ್ತೇವೆ ಎಂದು ಅವರು ಹೇಳಿದರು.