ತೂಕ ಇಳಿಸಿಕೊಳ್ಳುವ ಆತುರದಲ್ಲಿ ಪ್ರಾಣ ಕಳೆದುಕೊಂಡ್ಳು!

ತೂಕ ಇಳಿಸ್ಕೊಂಡು, ಫಿಗರ್ ಮೆಂಟೇನ್ ಮಾಡ್ಬೇಕು ಎಂಬುದು ಬಹುತೇಕರ ಕನಸು. ಈಗಿನ ದಿನಗಳಲ್ಲಿ ಬೊಜ್ಜಿನ ಸಮಸ್ಯೆ ಮಾಮೂಲಿ ಎನ್ನುವಂತಾಗಿದೆ. ಸಣ್ಣ ವಯಸ್ಸಿನಲ್ಲಿಯೇ ಜನರು ಅತಿ ಹೆಚ್ಚು ತೂಕದ ಸಮಸ್ಯೆ ಎದುರಿಸುತ್ತಾರೆ. ತೂಕ, ಸೌಂದರ್ಯ ಹಾಳು ಮಾಡುವುದು ಮಾತ್ರವಲ್ಲ, ಹೃದಯ ರೋಗ  ಸೇರಿದಂತೆ ಅನೇಕ ರೋಗಕ್ಕೆ ಆಹ್ವಾನ ನೀಡುತ್ತದೆ. ತಪ್ಪಾದ ಜೀವನ ಶೈಲಿ, ಆಹಾರ ಪದ್ಧತಿ, ಆನುವಂಶಿಕತೆ ಸೇರಿದಂತೆ ತೂಕ ಹೇಗೋ ಏರಿರುತ್ತೆ. ಅದನ್ನು ಒಂದೇ ತಿಂಗಳಲ್ಲಿ ಇಳಿಸ್ತೇವೆ ಅಂದ್ರೆ ಅದು ದುಸ್ಸಾಹಸ. ಅದನ್ನು ಮೂರ್ಖತನವೆಂದು ಕರೆಯಬೇಕು. ತೂಕವನ್ನು ತ್ವರಿತವಾಗಿ ಇಳಿಸೋದ್ರಿಂದ ಅನೇಕ ಸಮಸ್ಯೆ ನಮ್ಮನ್ನು ಕಾಡುತ್ತದೆ. ಆರೋಗ್ಯ ಹದಗೆಡುವುದು ಮಾತ್ರವಲ್ಲ ಅನೇಕ ಸಂದರ್ಭದಲ್ಲಿ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಚೀನಾದಲ್ಲಿ ಯುವತಿಯೊಬ್ಬಳು ತನ್ನ 90 ಕೆ.ಜಿ ತೂಕ ಕಳೆದುಕೊಳ್ಳುವ ಆತುರದಲ್ಲಿ ಪ್ರಾಣ ಬಿಟ್ಟಿದ್ದಾಳೆ. ಅಷ್ಟಕ್ಕೂ ನಡೆದದ್ದು ಏನು ಎಂಬುದನ್ನು ನಾವು ಹೇಳ್ತೇವೆ.

ತೂಕ ಇಳಿಸಿಕೊಳ್ಳಲು ಹೋಗಿ ಪ್ರಾಣ ಬಿಟ್ಟ ಯುವತಿ : 21 ವರ್ಷದ ಕುಯಿಹುವಾ ಚೀನಾ ಮೂಲದವಳು. ಆಕೆ 90 ಕೆ.ಜಿ ತೂಕ ಹೊಂದಿದ್ದಳು. ತೂಕ ಇಳಿಕೆಗೆ ಮುಂದಾದ ಕುಯಿಹುವಾ, ಕಠಿಣ ಪರಿಶ್ರಮಕ್ಕೆ ಇಳಿದಿದ್ದಳು. ಕಸರತ್ತು, ವ್ಯಾಯಾಮದ ಜೊತೆ ಉಪವಾಸವಿದ್ದು ತೂಕ ಇಳಿಸಲು ಮುಂದಾಗಿದ್ದಳು. ಅದ್ರಲ್ಲಿ ಯಶಸ್ಸು ಕೂಡ ಕಂಡಿದ್ದಳು. ಕೇವಲ 2 ತಿಂಗಳಲ್ಲಿ 25 ಕೆಜಿ ತೂಕ ಇಳಿಸಿಕೊಂಡಿದ್ದಳು. ಆದ್ರೆ ಆಕೆ ಈ ಪ್ರಯತ್ನವೇ ಮುಳುವಾಗಿದೆ. ಆಕೆ ಸಾವನ್ನಪ್ಪಿದ್ದಾಳೆ.