ಕರ್ನಾಟಕವನ್ನು ಕಡೆಗಣಿಸಿದ ‘ಆದಿಪುರುಷ್​’ ತಂಡ; ಉತ್ತರ ಭಾರತದ ಮೇಲೆ ಭಾರಿ ವ್ಯಾಮೋಹ

ಬಹಳ ದೊಡ್ಡ ಮಟ್ಟದಲ್ಲಿ ‘ಆದಿಪುರುಷ್​’ ಸಿನಿಮಾ  ಬಿಡುಗಡೆ ಆಗುತ್ತಿದೆ. ಈ ಸಿನಿಮಾಗೆ ಓಂ ರಾವತ್​ ಅವರು ನಿರ್ದೇಶನ ಮಾಡಿದ್ದಾರೆ. ರಾಮಾಯಣದ ಕಥೆಯನ್ನು ಆಧರಿಸಿದ ಈ ಚಿತ್ರದಲ್ಲಿ ಪ್ರಭಾಸ್​ ಅವರು ರಾಮನ ಪಾತ್ರ ನಿಭಾಯಿಸಿದ್ದಾರೆ. ಸೀತೆಯಾಗಿ ಕೃತಿ ಸನೋನ್​ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಈ ಸಿನಿಮಾ ಮೇಲೆ ಹೈಪ್​ ಕ್ರಿಯೇಟ್​ ಆಗಿದೆ. ಜೂನ್​ 16ರಂದು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ‘ಆದಿಪುರುಷ್​’ ತೆರೆಕಾಣಲಿದೆ. ಹಿಂದಿ, ತೆಲುಗು ಮಾತ್ರವಲ್ಲದೇ ಕನ್ನಡ, ಮಲಯಾಳಂ ಹಾಗೂ ತಮಿಳಿನಲ್ಲೂ ಈ ಸಿನಿಮಾ ಪ್ರದರ್ಶನ ಆಗಲಿದೆ. ಆದರೆ ಹಿಂದಿ ಮತ್ತು ತೆಲುಗಿನಲ್ಲಿ ಮಾತ್ರ ಹೆಚ್ಚಿನ ಪ್ರಚಾರ ಮಾಡಲಾಗುತ್ತಿದೆ. ಕನ್ನಡ, ಮಲಯಾಳಂ ಹಾಗೂ ತಮಿಳು ವರ್ಷನ್​ಗಳ ಪ್ರಚಾರಕ್ಕೆ ನಿರ್ಲಕ್ಷ್ಯ ವಹಿಸಲಾಗಿದೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

‘ಆದಿಪುರುಷ್​’ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿರುವುದು ಹಿಂದಿ ಚಿತ್ರರಂಗದ ನಿರ್ದೇಶಕ ಓಂ ರಾವತ್​. ನಾಯಕಿ ಕೃತಿ ಸನೋನ್​ ಕೂಡ ಬಾಲಿವುಡ್​ನವರು. ರಾವಣನ ಪಾತ್ರ ಮಾಡಿದ ಸೈಫ್​ ಅಲಿ ಖಾನ್​, ಲಕ್ಷ್ಮಣನಾಗಿ ಕಾಣಿಸಿಕೊಳ್ಳಲಿರುವ ಸನ್ನಿ ಸಿಂಗ್​, ಆಂಜನೇಯನ ಪಾತ್ರ ಮಾಡಿದ ದೇವದತ್ತ ನಾಗೆ ಕೂಡ ಹಿಂದಿಯವರು. ನಿರ್ಮಾಣ ಸಂಸ್ಥೆಯಾದ ಟಿ-ಸೀರಿಸ್​ ಕೂಡ ಬಾಲಿವುಡ್​ನದ್ದು. ಅದೇ ಕಾರಣಕ್ಕೋ ಏನೋ ಹಿಂದಿ ವರ್ಷನ್​ ಪ್ರಚಾರಕ್ಕೆ ಅಪಾರ ಆಸಕ್ತಿ ವಹಿಸಿರುವ ‘ಆದಿಪುರುಷ್​’ ಚಿತ್ರತಂಡ ಕನ್ನಡ, ಮಲಯಾಳಂ ಮತ್ತು ತಮಿಳು ಪ್ರೇಕ್ಷಕರ ಬಗ್ಗೆ ಸ್ವಲ್ಪವೂ ಗಮನ ಹರಿಸಿಲ್ಲ.

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ‘ಆದಿಪುರುಷ್​’ ಸಿನಿಮಾದ ಟೀಸರ್​ ಬಿಡುಗಡೆ ಮಾಡಲಾಗಿತ್ತು. ನಂತರ ಪ್ರೀ-ರಿಲೀಸ್​ ಇವೆಂಟ್​ ಮತ್ತು 2ನೇ ಟ್ರೇಲರ್​ ಬಿಡುಗಡೆಯನ್ನು ತಿರುಪತಿಯಲ್ಲಿ ಮಾಡಲಾಯಿತು. ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಯಾವುದೇ ಇವೆಂಟ್​ ಮಾಡಿಲ್ಲ. ಈ ಮೂರು ರಾಜ್ಯಗಳನ್ನು ಯಾಕೆ ಕಡೆಗಣಿಸಲಾಗಿದೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಈ ಎಲ್ಲ ರಾಜ್ಯಗಳಲ್ಲೂ ಈಗಾಗಲೇ ಬುಕಿಂಗ್​ ಓಪನ್​ ಆಗಿದೆ. ಜೀರೋ ಪ್ರಮೋಷನ್​ ಮಾಡಿರುವ ಈ ರಾಜ್ಯಗಳಲ್ಲಿ ಎಷ್ಟು ಕಲೆಕ್ಷನ್​ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ದೆಹಲಿಯಲ್ಲಿ ‘ಆದಿಪುರುಷ್​’ ಸಿನಿಮಾದ ಕ್ರೇಜ್​ ಕೊಂಚ ಜಾಸ್ತಿಯೇ ಇದೆ. ರಾಷ್ಟ್ರ ರಾಜಧಾನಿಯಲ್ಲಿ ಈ ಸಿನಿಮಾದ ಟಿಕೆಟ್​ ಬೆಲೆ ಮುಗಿಲು ಮುಟ್ಟಿದೆ. 2250 ರೂಪಾಯಿ ಟಿಕೆಟ್​ ದರ ಇರುವ ಮಾಲ್​ಗಳಲ್ಲೂ ಬಹುತೇಕ ಟಿಕೆಟ್​ಗಳು ಸೋಲ್ಡ್​ ಔಟ್​ ಆಗಿವೆ. ಇದು ಚಿತ್ರತಂಡದ ಖುಷಿಗೆ ಕಾರಣ ಆಗಿದೆ. 3ಡಿ ವರ್ಷನ್​ನಲ್ಲಿ ಈ ಸಿನಿಮಾ ಪ್ರದರ್ಶನ ಆಗಲಿದೆ. ‘ಬಾಹುಬಲಿ 2’ ಬಳಿಕ ಮತ್ತೊಂದು ದೊಡ್ಡ ಗೆಲುವಿಗಾಗಿ ಪ್ರಭಾಸ್​ ಕಾದಿದ್ದಾರೆ.