ಗುಜರಾತ್‌ನ ದ್ವಾರಕಾಧೀಶ ದೇವಾಲಯ ಬಂದ್

ದ್ವಾರಕಾ:ಬಿಪರ್‌ಜೋಯ್ ಚಂಡಮಾರುತ ಗುಜರಾತ್‌ನ ಕರಾವಳಿ ಪ್ರದೇಶವನ್ನು ಸಮೀಪಿಸುತ್ತಿದ್ದಂತೆ, ದೇವಭೂಮಿ ದ್ವಾರಕಾದಲ್ಲಿರುವ ದ್ವಾರಕಾಧೀಶ ದೇವಾಲಯವನ್ನು ಗುರುವಾರ ಮುಚ್ಚಲಾಗಿದೆ. ದ್ವಾರಕಾಧೀಶ್ ದೇವಾಲಯದ ಜೊತೆಗೆ ದ್ವಾರಕಾ ಬಜಾರ್ ಕೂಡ ಮುಚ್ಚಲಾಗಿದೆ. ಆದರೆ, ದೇವಸ್ಥಾನದ ಪ್ರತಿದಿನ ನಡೆಯುವ ಪೂಜೆ ಯಥಾಸ್ಥಿತಿಯಾಗಿ ಮುಂದುವರಿಯಲಿದೆ. ಬೆಳಗಿನ ಪೂಜೆ, ಭೋಗ್ ಮತ್ತು ಆರತಿ ಇರುತ್ತದೆ. ದ್ವಾರಕಾಧೀಶ ದೇವಾಲಯದ ಅಧಿಕೃತ ವೆಬ್‌ಸೈಟ್ ಮೂಲಕ ನೇರ ದರ್ಶನವನ್ನು ಪ್ರವೇಶ ಪಡೆಯಬಹುದು ಎಂದು ದ್ವಾರಕಾಧೀಶ ದೇವಾಲಯದ ಅರ್ಚಕ ಮಲಯ್ ಪಾಂಡ್ಯ ತಿಳಿಸಿದ್ದಾರೆ.

ಬಿಪರ್‌ಜೋಯ್ ಜೂನ್ 15ರ ಸಂಜೆ ಗುಜರಾತ್‌ನ ಜಖೌ ಕರಾವಳಿಯ ಬಳಿ ಭೂಕುಸಿತ ಉಂಟು ಮಾಡುವ ಸಾಧ್ಯತೆ ಇದೆ. ದಕ್ಷಿಣ ಭಾಗ ಅನೇಕ ಕಡೆ ಇದು ಅಪ್ಪಳಿಸಲಿದೆ ಎಂದು ಹೇಳಲಾಗಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ವಿಎಸ್‌ಸಿಎಸ್ (ಅತಿ ತೀವ್ರ ಚಂಡಮಾರುತ) ಬಿಪರ್‌ಜೋಯ್ ಇಂದು ಸಂಜೆಯ ವೇಳೆಗೆ ಸೌರಾಷ್ಟ್ರ, ಕಚ್ ಮತ್ತು ಪಕ್ಕದ ಪಾಕಿಸ್ತಾನದ ಕರಾವಳಿಯನ್ನು ಮಾಂಡ್ವಿ ಮತ್ತು ಕರಾಚಿ ನಡುವೆ ಜಖೌ ಬಂದರಿಗಳಿಗೂ ಅಪ್ಪಳಿಸಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.

ಬಿಪರ್‌ಜೋಯ್ ಚಂಡಮಾರುತದಿಂದ ಉದ್ಭವಿಸುವ ಯಾವುದೇ ಸಮಸ್ಯೆಗಳನ್ನು ಎದುರಿಸಲು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದೆ. ಈಗಾಗಲೇ ಬಿಎಸ್‌ಎಫ್ ಗುಜರಾತ್‌ನ ಇನ್ಸ್‌ಪೆಕ್ಟರ್ ಜನರಲ್ ರವಿ ಗಾಂಧಿ ಅವರು ಭುಜ್‌ನ ಕರಾವಳಿ ಪ್ರದೇಶಗಳಿಗೆ ಭೇಟಿ ನೀಡಿ. ಪರಿಸ್ಥಿತಿಯನ್ನು ಎದುರಿಸಲು ಮಾಡಿರುವ ಕಾರ್ಯಗಳ ಬಗ್ಗೆ ಪರಿಶೀಲನೆ ಮಾಡಲಾಗಿದೆ.

ಎಎನ್‌ಐ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಬಿಎಸ್‌ಎಫ್ ಐಜಿ ರವಿ ಗಾಂಧಿ, ಅಂತರರಾಷ್ಟ್ರೀಯ ಗಡಿಯಲ್ಲಿ ಬಿಎಸ್‌ಎಫ್ ಪಡೆಗಳನ್ನು ನಿಯೋಜಿಸಲಾಗಿದೆ. ಐಎಂಡಿ ಮೌಲ್ಯಮಾಪನದ ಪ್ರಕಾರ, ಈ ಚಂಡಮಾರುತದ ಪ್ರಭಾವ ಮಾಂಡವಿಯಿಂದ ಕರಾಚಿವರೆಗೆ ಇದೆ. ನಮ್ಮ ಪಡೆಗಳು ಸಂಪೂರ್ಣ ಸಿದ್ಧತೆಯನ್ನು ಮಾಡಿಕೊಂಡಿದೆ. ಜನರಿಗೆ ಈ ಸಮಯದಲ್ಲಿ ಯಾವುದೇ ರೀತಿಯ ಸಹಾಯಗಳನ್ನು ಮಾಡಲು ಸಿದ್ಧ ಎಂದು ಹೇಳಿದ್ದಾರೆ.