ಖಲಿಸ್ತಾನಿ ಬೆಂಬಲಿಗ ಅವತಾರ್ ಸಿಂಗ್ ಖಂಡಾ ಯುಕೆಯಲ್ಲಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅವರು ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಅವತಾರ್ ಬರ್ಮಿಂಗ್‌ಹ್ಯಾಮ್ ಸಿಟಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅವರಿಗೆ ರಕ್ತದ ಕ್ಯಾನ್ಸರ್ ಇರುವುದು ಪತ್ತೆಯಾದ ನಂತರ ಖಂಡಾ ಅವರನ್ನು ಲಂಡನ್‌ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಲಂಡನ್‌ನಲ್ಲಿರುವ ರಾಯಭಾರ ಕಚೇರಿಯಲ್ಲಿ ಭಾರತದ ರಾಷ್ಟ್ರಧ್ವಜವನ್ನು ಕೆಳಗಿಳಿದಿದ್ದಕ್ಕಾಗಿ ಅವರನ್ನು ಯುಕೆಯಲ್ಲಿ ಬಂಧಿಸಲಾಗಿತ್ತು.
ಜೀವಂತ ಬಾಂಬ್‌ಗಳನ್ನು ಹೇಗೆ ತಯಾರಿಸುವುದು ಮತ್ತು ಐಇಡಿಗಳನ್ನು ಹೇಗೆ ನಿರ್ವಹಿಸುವುದು ಎಂಬುದರ ಕುರಿತು ಸಿಖ್ ಯುವಕರಿಗೆ ತರಬೇತಿ ನೀಡಿದ ಆರೋಪ ಖಂಡಾ ಮೇಲಿತ್ತು. ಖಂಡಾ ಅವರು ಖಲಿಸ್ತಾನ್ ಲಿಬರೇಶನ್ ಫೋರ್ಸ್ (ಕೆಎಲ್‌ಎಫ್) ನ ಲಂಡನ್ ಘಟಕದ ಮುಖ್ಯಸ್ಥರಾಗಿದ್ದರು ಮತ್ತು ಕೆಎಲ್‌ಎಫ್ ಭಯೋತ್ಪಾದಕ ಕುಲ್ವಂತ್ ಸಿಂಗ್ ಖುಖ್ರಾನಾ ಅವರ ಪುತ್ರರಾಗಿದ್ದರು.
ಏಪ್ರಿಲ್ 23 ರಂದು ಪಂಜಾಬ್‌ನ ಮೋಗಾ ಜಿಲ್ಲೆಯಿಂದ ಅಮೃತಪಾಲ್ ಅವರನ್ನು ಬಂಧಿಸಲಾಯಿತು. ಮಾರ್ಚ್ 19 ರಂದು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಮೇಲೆ ನಡೆದ ದಾಳಿಯ ಹಿಂದಿನ ಮಾಸ್ಟರ್‌ಮೈಂಡ್ ಅವತಾರ್ ಖಂಡಾ.
ಭಾರತೀಯ ಹೈಕಮಿಷನ್ ಮೇಲಿನ ದಾಳಿ ಮತ್ತು ರಾಷ್ಟ್ರಧ್ವಜವನ್ನು ಅಪವಿತ್ರಗೊಳಿಸಿದ ನಾಲ್ವರಲ್ಲಿ ಖಂಡಾ ಕೂಡ ಒಬ್ಬರು ಎಂದು ಎನ್ಐಎ ಗುರುತಿಸಿತ್ತು. ಖಂಡಾ ವಾರಿಸ್ ದೇ ಸಂಘಟನೆಯ ಮುಖ್ಯಸ್ಥ ಖಲಿಸ್ತಾನಿ ಬೆಂಬಲಿಗ ಅಮೃತ್ಪಾಲ್ ಸಿಂಗ್ನ ನಿಕಟ ಅನುಯಾಯಿಯೂ ಆಗಿದ್ದ, ಪಂಜಾಬ್ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದ ವ್ಯಕ್ತಿಗಳಲ್ಲಿ ಅವತಾರ್ ಪ್ರಮುಖ. ಆತನ ನಿಜವಾದ ಹೆಸರು ರಂಜೋತ್ ಸಿಂಗ್ ಎಂಬ ಮಾಹಿತಿ ಲಭ್ಯವಾಗಿದೆ.