ಮೈಸೂರು: ಜಿಲ್ಲಾ ವ್ಯಾಪ್ತಿಯ ಪ್ರತಿಷ್ಠಿತ ಕಬಿನಿ ಜಲಾಶಯದ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ.
ಜಲಾಶಯದಲ್ಲಿ ಒಟ್ಟು 19.50 TMC ನೀರು ಸಂಗ್ರಹವಾಗುತ್ತದೆ. ಆದ್ರೆ ಸದ್ಯಕ್ಕೆ ಜಲಾಶಯದಲ್ಲಿ 4 TMC ಮಾತ್ರ ನೀರಿನ ಸಂಗ್ರಹ ಇದೆ. ಅದರಲ್ಲಿ ಡೆಡ್ ಸ್ಟೋರೆಜ್ ತೆಗೆದರೆ ಬಳಕೆಗೆ ಸಿಗುವುದು ಕೇವಲ 2 TMC ನೀರು ಮಾತ್ರ.
ಕಬಿನಿ ಜಲಾಶಯದಿಂದ ಮೈಸೂರು, ಬೆಂಗಳೂರಿನ ಕೆಲ ಭಾಗ, ನಂಜನಗೂಡು, ಟಿ. ನರಸೀಪುರ, ಗುಂಡ್ಲುಪೇಟೆ, ಚಾಮರಾಜನಗರಕ್ಕೆ ಕುಡಿಯುವ ನೀರು ಒದಗಿಸಲಾಗುತ್ತದೆ. ಹೀಗಾಗಿ ಜಲಾಶಯದಲ್ಲಿ ನೀರು ಬರಿದಾಗುತ್ತಿದ್ದು ಈ ಭಾಗಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಆತಂಕವಿದೆ.