ವಿಜಯಪುರ (ಜೂ.14): ಇತ್ತೀಚೆಗೆ ತಾನೆ ಮದುವೆಯಾಗಿದ್ದ ಜೋಡಿಗೆ ಇನ್ನೂ ಹಸಿಮೈ ಕೂಡ ಆರಿರಲಿಲ್ಲ. ನೂರೆಂಟು ಕನಸುಗಳನ್ನು ಕಟ್ಟಿಕೊಂಡು ಅದ್ಧೂರಿಯಾಗಿ ವಿವಾವಾಗಿದ್ದ ಜೋಡಿ ತಿಂಗಳು ಪೂರೈಸುವ ಮೊದಲೇ ಭೀಕರ ಬೈಕ್ ಅಪಘಾತದಲ್ಲಿ ಜೊತೆಯಾಗಿಯೇ ಇಹಲೋಕವನ್ನು ತ್ಯಜಿಸಿದ್ದಾರೆ.
ಬೈಕ್ ಹಾಗೂ ಕ್ಯಾಂಟರ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ನವವಿವಾಹಿತ ಜೋಡಿಯೊಂದು ರಸ್ತೆಯಲ್ಲಿಯೇ ಅನಾಥವಾಗಿ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ನವ ವಿವಾಹಿತ ಗಂಡ ಹೆಂಡತಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಮದುವೆಯಾದ 24 ದಿನಗಳಲ್ಲೆ ನವಜೋಡಿ ದುರ್ಮರಣ ಕಂಡಿದ್ದಾರೆ. ವಿಜಯಪುರ ನಗರದ ಹೊರವಲಯದ ಸೋಲಾಪುರ ಬೈಪಾಸ್ ಬಳಿ ತಡರಾತ್ರಿ ಘಟನೆ ನಡೆದಿದೆ. ಬೈಕ್ ಹಾಗೂ ಕ್ಯಾಂಟರ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ದುರ್ಘಟನೆ ಸಂಭವಿಸಿದೆ.