ಹೊಸದಿಲ್ಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ 10 ನೇ ತರಗತಿ ಫಲಿತಾಂಶವನ್ನು ಶುಕ್ರವಾರ ಘೋಷಿಸಿದೆ. ಈ ವರ್ಷ ಒಟ್ಟು 94.40 ಶೇಕಡಾದಷ್ಟು ವಿದ್ಯಾರ್ಥಿಗಳು 10 ನೇ ತರಗತಿ ಪರೀಕ್ಷೆ ಉತ್ತೀರ್ಣರಾಗಿದ್ದಾರೆ.
64,908 ವಿದ್ಯಾರ್ಥಿಗಳು 95% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. 2,36,993 ವಿದ್ಯಾರ್ಥಿಗಳು 90% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಾರೆ. ಸಿ ಬಿ ಎಸ್ ಇ 10 ನೇ ತರಗತಿ ಪರೀಕ್ಷೆಗಳು ಎಪ್ರಿಲ್ 26ರಿಂದ ಮೇ 4 ರವರೆಗೆ ನಡೆದಿತ್ತು.
ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಸಿಬಿಎಸ್‌ಇ ಅಧಿಕೃತ ವೆಬ್‌ಸೈಟ್ cbse.gov.in ನಲ್ಲಿ ಪರಿಶೀಲಿಸಬಹುದು. ಸಿಬಿಎಸ್ ಇ 10 ನೇ ವಿದ್ಯಾರ್ಥಿಗಳು ವೆಬ್‌ಸೈಟ್‌ಗಳಾದ cbseresults.nic.in, parikshasangam.cbse.gov.in ಹಾಗೂ results.cbse.nic.in ನಲ್ಲಿ ತಮ್ಮ ಫಲಿತಾಂಶ ನೋಡಬಹುದು.