ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಮೊದಲ ಗ್ಯಾರಂಟಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಶಕ್ತಿ ಯೋಜನೆಯು ರಾಜ್ಯಾದ್ಯಂತ ಜೂನ್ 11ರ ಭಾನುವಾರ ಯಶಸ್ವಿಯಾಗಿ ಉದ್ಘಾಟನೆಯಾಗಿದೆ ಇಂದು ಈ ಯೋಜನೆಯ ಎರಡನೇ ದಿನವಾಗಿದ್ದು ವಿದ್ಯಾರ್ಥಿನಿಯರು, ಯುವತಿಯರು, ಮಹಿಳೆಯರು ಸರ್ಕಾರಿ ಬಸ್ಗಳಿಗೆ ಮುಗಿಬಿದ್ದಿದ್ದಾರೆ. ಉಚಿತ ಪ್ರಯಾಣವೆಂದು ಕೆಂಪು ಬಸ್ಗಳನ್ನತ್ತುತ್ತಿದ್ದಾರೆ. ಇದರಿಂದ ಖಾಸಗಿ ಬಸ್ಗಳಿಗೆ ನಷ್ಟ ಎದುರಾಗಿದೆ.
ಶಿವಮೊಗ್ಗ, ಮಂಗಳೂರು, ಹಾಸನ, ಚಿತ್ರದುರ್ಗ ಸೇರಿದಂತೆ ಅನೇಕ ಕಡೆ ಸಾರಿಗೆ ಬಸ್ ನಿಲ್ದಾಣ ಫುಲ್ ರಶ್ ಆಗಿದ್ದು ಮತ್ತೊಂದು ಕಡೆ ಖಾಸಗಿ ಬಸ್ ನಿಲ್ದಾಣ ಖಾಲಿ ಖಾಲಿ ಕಂಡು ಬಂದಿದೆ. ಉಚಿತ ಬಸ್ ಪ್ರಯಾಣದ ಲಾಭ ಪಡೆಯಲು ನಾರಿಮಣಿಗಳು ಸರ್ಕಾರಿ ಬಸ್ಗಳಿಗೆ ಮುಗಿಬೀಳುತ್ತಿದ್ದಾರೆ.
ಉಚಿತ ಬಸ್‌ಗಳ ಸೇವೆ ಆರಂಭವಾಗುತ್ತಿದ್ದಂತೆ ಮಹಿಳೆಯರು ಖಾಸಗಿ ಬಸ್‌ಗಳತ್ತ ಮುಖ ಮಾಡುತ್ತಿಲ್ಲ. ಹಲವು ನಗರಗಳಲ್ಲಿ ಖಾಸಗಿ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿವೆ. ಅಲ್ಲದೆ ಖಾಸಗಿ ಬಸ್‌ಗಳ ಟಿಕೆಟ್ ಬುಕ್ಕಿಂಗ್ ಕೂಡ ಕಡಿಮೆ ಆಗಿದೆ. ದಿನಕ್ಕೆ 30ರಿಂದ 40 ಮಂದಿ ಮಹಿಳೆಯರು ಖಾಸಗಿ ಬಸ್ನಲ್ಲಿ ಓಡಾಡುತ್ತಿದ್ದರು. ಆದ್ರೆ ಈಗ ಒಬ್ಬರು ಕೂಡ ಬರುತ್ತಿಲ್ಲ ಎಂದು ಖಾಸಗಿ ಬಸ್‌ಗಳ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.