ಉಚಿತ ಪ್ರಯಾಣದಿಂದ ರಶ್​ ಆದ​ ಬಸ್​​ನಲ್ಲಿ ಕಳ್ಳರ ಕೈಚಳಕ, ಅಜ್ಜಿಯ ಬ್ಯಾಗನಿಂದ ಹಣ ಮಾಯ

ಬಾಗಲಕೋಟೆ:ಶಕ್ತಿ ಯೋಜನೆ ಅಡಿ ಮಹಿಳೆಯರು ಸರ್ಕಾರಿ ಬಸ್ ​ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದು, ಬೆಳಿಗ್ಗೆಯಿಂದ ರಾಜ್ಯಾದ್ಯಂತ ಸರ್ಕಾರಿ ಬಸ್ ರಶ್​​​​ ಆಗಿವೆ. ಬಸ್​​ ಒಳಗಡೆ ನಿಲ್ಲಲು ಸಹಿತ ಜಾಗವಿಲ್ಲದೆ ಪುಟ್​​ಬೋರ್ಡ್​​ಗಳ ಮೇಲೆ ನಿಂತು ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಇದೇ‌ ರೀತಿ ಬಾಗಲಕೋಟೆ ಜಿಲ್ಲೆಯ ಸಿಟಿ, ಬೇರೆ ಬೇರೆ ಊರುಗಳಿಗೆ ತೆರಳುವ ಬಸ್​ಗಳು ರಶ್​​ ಆಗಿವೆ. ಈ ರಶ್​ ಆದ ಬಸ್​​ಗಳಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದು, ಅಜ್ಜಿಯೊಬ್ಬರ ಬ್ಯಾಗನಲ್ಲಿದ್ದ 30 ಸಾವಿರ ಹಣವನ್ನು ಎಗರಿಸಿದ್ದಾರೆ. ​​ ​​

ವೃದ್ದೆ ಚೆನ್ನಮ್ಮ ಬಾಣದ ಎಂಬವರು ಬಾದಾಮಿಯ ಸಂಬಂಧಿಕರೊಬ್ಬರಿಗೆ 30 ಸಾವಿರ ರೂ. ಹಣ ಕೊಡಲು ಬಾಗಲಕೋಟೆ ತಾಲ್ಲೂಕಿನ ಗದ್ದನಕೇರಿ ಕ್ರಾಸ್​​ನಿಂದ ಸರ್ಕಾರಿ ಬಸ್​​ನಲ್ಲಿ ಹೊರಟಿದ್ದರು. ಈ ವೇಳೆ ಗದ್ದನಕೇರಿ ಕ್ರಾಸ್​-ಬಾಗಲಕೋಟೆ ಮಧ್ಯೆ ಅಜ್ಜಿ ಬ್ಯಾಗ್​ನಲ್ಲಿದ್ದ 30 ಸಾವಿರ ರೂ. ಹಣವನ್ನು ಎಗರಿಸಿದ್ದಾರೆ

ಮಹಿಳೆಯರು ಬಸ್ ನಲ್ಲಿ ಹೆಚ್ಚು ಜನರು ಇದ್ದರು, ಇತರೆ ಜನರು ಇದ್ದರು. ಇದರಿಂದ ಬಸ್ ಬಹಳ ರಶ್ ಆಗಿತ್ತು. ಬಸ್​​ನಲ್ಲಿ ಜನದಟ್ಟಣೆ ಹೆಚ್ಚಾದ್ದರಿಂದ ಮೊದಲು ಎರಡು ಬಸ್​ನಲ್ಲಿ ಹತ್ತಲಿಲ್ಲ. ನಂತರದ ಬಸ್ ರಶ್ ಇರೋದಿಲ್ಲ ಅನ್ಕೊಂಡಿದ್ದೆ, ಆದರೆ ಮೂರನೇ ಬಸ್ ಅದು ಕೂಡ ರಶ್ ಇತ್ತು. ಅನಿರ್ವಾಯ ಅಂತ ಅದೇ ಬಸ್ ಹತ್ತಿದೆ. ಸೀಟ್ ಸಿಗಲಿಲ್ಲ. ನಿಂತಾಗ ಹಣ ಹೊಡೆದಿದ್ದಾರೆ ಎಂದು ಚೆನ್ನಮ್ಮ ಬಾಣದ ಹೇಳಿದ್ದಾರೆ.

ಬಾಗಲಕೋಟೆ ಬಸ್ ಸ್ಟ್ಯಾಂಡ್ ಬಳಿ ಬರುತ್ತಿದ್ದಂತೆ ಬ್ಯಾಗ್ ‌ನೋಡಿದಾಗ ಹಣ ಇರಲಿಲ್ಲ. ಮನೆಯಲ್ಲಿ ಪೋನ್ ಪೆ‌ ಮಾಡ್ತಿದ್ವಿ ಯಾಕೆ ಹೊರಡಬೇಕಿತ್ತು ಅಂತ ಕೇಳ್ತಾರೆ ಏನು ಮಾಡೋದು. ಈಗ ಕಂಪ್ಲೆಂಟ್ ಕೊಡಬೇಕು ಅಂತ ಮಾಡಿನಿ ಎಂದು ಪೊಲೀಸರ ಎದುರು ಬ್ಯಾಗ್ ತೋರಿಸಿ ಅಜ್ಜಿ ಅಳಲು ತೋಡಿಕೊಂಡಿದ್ದಾರೆ.