ಮೈಸೂರು (ಜೂ.11): ಕುಡಿಯಲು ನಮಗೇ ನೀರಿಲ್ಲದಿರುವಾಗ ತಮಿಳುನಾಡಿಗೆ ಎಲ್ಲಿಂದ ಕೊಡುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮೊದಲು ನಮಗೆ ಕುಡಿಯುವ ನೀರು, ನಮ್ಮ ಬೆಳೆಗಳಿಗೆ ನೀರು ಕೊಡುವುದು ಮುಖ್ಯ. ನಮಗೇ ನೀರಿಲ್ಲದಿದ್ದರೆ ತಮಿಳುನಾಡಿಗೆ ಕೊಡುವ ಪ್ರಶ್ನೆಯೇ ಇಲ್ಲ. ನಮಗೆ ನೀರಿಲ್ಲ. ನಮ್ಮ ಬೆಳೆಗಳಿಗೂ ನೀರಿಲ್ಲ. ಹಾಗಾಗಿ, ನೀರು ಬಿಡುವ ಮಾತಿಲ್ಲ. ಹಾಗಂತ ತಮಿಳುನಾಡಿಗೆ ನೀರು ಕೊಡಬಾರದು ಅಂತೇನು ಇಲ್ಲ. ಸದ್ಯಕ್ಕೆ ನಮ್ಮಲ್ಲಿ ನೀರು ಇಲ್ಲ ಎಂದರು.