ನವದೆಹಲಿ: ಭಾರತದಲ್ಲಿ ಕೋವಿಡ್ ನಿಯಂತ್ರಿಸಲು ಕೈಗೊಂಡ ಯಶಸ್ವಿ ವ್ಯಾಕ್ಸಿನ್ ಡ್ರೈವ್ ಕುರಿತು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಪ್ರಧಾನಿ ಮೋದಿಯನ್ನು ಅಭಿನಂದಿಸಿದ್ದಾರೆ. 200 ಕೋಟಿ ಲಸಿಕೆಗಳನ್ನು ನೀಡಿ ಭಾರತ ಮತ್ತೊಂದು ಮೈಲಿಗಲ್ಲನ್ನ ತಲುಪುವಂತೆ ಮಾಡಿದ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.
ಟ್ವೀಟ್ನಲ್ಲೇನಿದೆ.?
‘200 ಕೋಟಿ ಲಸಿಕೆಗಳನ್ನು ನೀಡುವ ಮತ್ತೊಂದು ಮೈಲಿಗಲ್ಲನ್ನು ತಲುಪಿದ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು. ಕೋವಿಡ್-19 ನ ಪರಿಣಾಮ ತಗ್ಗಿಸಲು ಭಾರತೀಯ ಲಸಿಕೆ ತಯಾರಕರು ಮತ್ತು ಭಾರತ ಸರ್ಕಾರದೊಂದಿಗೆ ನಿಮ್ಮ ನಿರಂತರ ಪಾಲುದಾರಿಕೆಗಾಗಿ ನಾವು ಕೃತಜ್ಞರಾಗಿರುತ್ತೇವೆ’
– ಬಿಲ್ ಗೇಟ್ಸ್
ಭಾರತ ಮತ್ತೆ ಇತಿಹಾಸ ಸೃಷ್ಟಿಸಿದೆ.! ವಿಶ್ವದ ಅತಿದೊಡ್ಡ ಕೋವಿಡ್ ಲಸಿಕೆ ಡ್ರೈವ್ ಪ್ರಾರಂಭಿಸಿದ ಒಂದು ವರ್ಷದಲ್ಲಿ 200 ಕೋಟಿ ವ್ಯಾಕ್ಸಿನೇಷನ್ ಡೋಸ್ಗಳನ್ನು ನೀಡಿ ಮೈಲಿಗಲ್ಲನ್ನು ದಾಟಿದೆ. ಇದಕ್ಕಾಗಿ ಎಲ್ಲಾ ಭಾರತೀಯರಿಗೆ ಅಭಿನಂದನೆಗಳು. ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಟ್ವೀಟ್ ಮಾಡಿದ್ದರು.