ಕುಡಿದು ಮಧ್ಯರಾತ್ರಿ ಯುವಕರ ಡೆಡ್ಲಿ ಡ್ರೈವಿಂಗ್- ಅಮಾಯಕ ಜೀವಗಳು ಜಸ್ಟ್ ಮಿಸ್

ಬೆಂಗಳೂರು: ಮಧ್ಯರಾತ್ರಿ ಕುಡಿದು ಯುವಕರು ಡೆಡ್ಲಿ ಡ್ರೈವಿಂಗ್ ಮಾಡಿದ್ದಾರೆ. ಈ ಯುವಕರ ಹುಚ್ಚಾಟದ ಡ್ರೈವಿಂಗ್ ನಿಂದ ಅಮಾಯಕ ಜೀವಗಳು ಜಸ್ಟ್ ಮಿಸ್ ಆಗಿದೆ.

ಜೆಪಿ ನಗರ ಅಂಡರ್ ಪಾಸ್ ನಲ್ಲಿ ಘಟನೆ ನಡೆದಿದ್ದು, ಯುವಕರ ಹುಚ್ಚಾಟದಿಂದ ಎರಡು ಕಾರು ಒಂದು ಆಟೋ ಜಖಂ ಆಗಿದೆ. ಕೂದಲೆಳೆ ಅಂತರದಲ್ಲಿ 6 ಜನ ಪ್ರಯಾಣಿಕರು ಜಸ್ಟ್ ಎಸ್ಕೇಪ್ ಆಗಿದ್ದಾರೆ. 

ಸ್ಕೋಡಾ ಕಾರು ವೆಗಾಸಿಟಿ ಕಡೆಯಿಂದ ಜೆಪಿ ನಗರ ಮೆಟ್ರೋ ಸ್ಟೇಷನ್ ಕಡೆ ಬರುತ್ತಿತ್ತು. ಇದರಲ್ಲಿ ನಾಲ್ವರು ಯುವಕ ಮತ್ತು ಯುವತಿಯರು ಇದ್ದರು. ಚಾಲಕ ಅತಿವೇಗದಲ್ಲಿ ಕಾರು ಚಲಾಯಿಸುತ್ತಿದ್ದು, ನಿಯಂತ್ರಣ ತಪ್ಪಿ ಮೊದಲು ಆಟೋಗೆ ಡಿಕ್ಕಿಯಾಗಿದೆ. ಆಟೋ ತಪ್ಪಿಸಲು ಹೋಗಿ ಮತ್ತೆ ಡಿವೈಡರ್ ಗೆ ಕಾರು ಡಿಕ್ಕಿ ಹೊಡೆದಿದೆ. ಮತ್ತೆ ಪಕ್ಕದಲ್ಲಿ ಬರುತ್ತಿದ್ದ ರೆನಾಲ್ಟ್ ಡಸ್ಟರ್ ಕಾರಿಗೆ ಡಿಕ್ಕಿಯಾಗಿದೆ.

ಸ್ಕೋಡಾ ಗುದ್ದಿದ ರಭಸಕ್ಕೆ ಡಸ್ಟರ್ ಕಾರು ಪಲ್ಟಿಯಾಗಿದೆ. ಆಟೋ ಚಾಲಕ ಮತ್ತು ಡಸ್ಟರ್ ಕಾರು ಚಾಲಕ ಲಿಖಿತ್ ಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿರುವ ಮೂರು ವಾಹನಗಳ ಪ್ರಯಾಣಿಕರು ಪಾರಾಗಿದ್ದಾರೆ. ಜಯನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.