‘ಗೃಹಜ್ಯೋತಿ’ ಫಲಾನುಭವಿಯಾಗಲು ಮೊದಲು ಬಾಕಿ ಇರುವ ಬಿಲ್ ಕಟ್ಟಿ: ಗ್ರಾಹಕರಿಗೆ ಎಸ್ಕಾಂಗಳಿಂದ ಬಿಗ್ ಶಾಕ್

ಬೆಂಗಳೂರು (ಜೂ.07): ಕರ್ನಾಟಕ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದ್ದ ‘ಗೃಹಜ್ಯೋತಿ’ ಯೋಜನೆ ಬಗ್ಗೆ ಅಧಿಕೃತ ಆದೇಶ ಪ್ರಕಟವಾಗಿದೆ. ಯೋಜನೆಯ ಫಲಾನುಭವಿಗಳಾಗಲು ಹಲವು ಷರತ್ತುಗಳಿವೆ. ಈ ಯೋಜನೆಯ ಲಾಭ ಪಡೆಯುಬೇಕಾದರೆ ಜನರು ಮೊದಲು ಬಾಕಿ ಇರುವ ಮನೆಯ ವಿದ್ಯುತ್ ಬಾಕಿ ಪಾವತಿ ಮಾಡಬೇಕು ಎಂದು ಎಸ್ಕಾಂ ವಿದ್ಯುತ್ ಗ್ರಾಹಕರಿಗೆ ತಿಳಿಸಿದೆ.

‌ ಹೌದು! ನೀವು ಗೃಹಜ್ಯೋತಿ.. ಫಲಾನುಭವಿಯಾಗಬೇಕಾ..? ಹಾಗಾದರೆ ಮೊದಲು ಬಾಕಿ ಇರುವ ಬಿಲ್ ಕಟ್ಟಲೇಬೇಕು. ಬಾಕಿ ಬಿಲ್ ಪಾವತಿ ಮಾಡದಿದ್ರೆ ನಿಮಗೆ ಗೃಹಜ್ಯೋತಿ ಸ್ಕೀಂ ಸಿಗೋದಿಲ್ಲ. 

ಮೊದಲು ಬಿಲ್ ಬಾಕಿ ಕಟ್ಟಿ ಬಳಿಕ ಗೃಹಜ್ಯೋತಿ ಸ್ಕೀಂ ಪಡೆಯಿರಿ ಅಂತ ಎಸ್ಕಾಂ ಷರತ್ತು ಹಾಕಿದೆ. ಯೋಜನೆಯ ಫಲಾನುಭವಿಗಳಾಗಲು ಗ್ರಾಹಕರು ಜೂನ್ 2023ರ ವರೆಗಿನ ಪೂರ್ಣ ವಿದ್ಯುತ್ ಬಾಕಿ ಪಾವತಿಸಬೇಕು. ಇಲ್ಲದಿದ್ರೆ ಗೃಹಜ್ಯೋತಿ ಸ್ಕೀಂ ಮರೀಚಿಕೆ. ಗೃಹಜ್ಯೋತಿ ಸ್ಕೀಂಗೆ ವಿದ್ಯುತ್ ಬಳಕೆಯ ಬಾಕಿ ಬಿಲ್ ಸರ್ಕಾರ ಕಡ್ಡಾಯ ಮಾಡಿದೆ. ಬಾಕಿ ಬಿಲ್ ಪಾವತಿಸಿ ಗೃಹಜ್ಯೋತಿ ಸ್ಕೀಂ ಪಡೆಯಿರಿ ಅಂತ ಇಂಧನ ಇಲಾಖೆ ಮನವಿ ಮಾಡಿದೆ. ಗ್ರಾಹಕರಿಂದ ಕೋಟಿ ಕೋಟಿ ಬಾಕಿ ಬಿಲ್ ಹಿನ್ನೆಲೆಯಲ್ಲಿ ಗೃಹಜ್ಯೋತಿಗೆ ಬಾಕಿ ಬಿಲ್ ಪಾವತಿ ಕಡ್ಡಾಯ ಮಾಡಿರೋ ಸರ್ಕಾರವು ಬಾಕಿ ಬಿಲ್ ಕಟ್ಟಿ ಗೃಹಜ್ಯೋತಿ ಯೋಜನೆಗೆ ಅರ್ಹ ಫಲಾನುಭವಿಗಳಾಗಿ ಅಂತ  ವಿದ್ಯುತ್ ಸರಬರಾಜು ಕಂಪನಿಗಳು ಮನವಿ ಮಾಡಿವೆ.

ಗೊಂದಲದ ಗೂಡಾದ ಸರ್ಕಾರದ ಗೃಹಜ್ಯೋತಿ ಸ್ಕೀಂ: ಸರ್ಕಾರದ ಗೃಹಜ್ಯೋತಿ ಯೋಜನೆ ಮಾರ್ಗಸೂಚಿಯಿಂದ ಎಸ್ಕಾಂಗಳಿಗೂ ಗೊಂದಲವಾಗಿದ್ದು, ಗೃಹಜ್ಯೋತಿ ಯೋಜನೆಯಲ್ಲಿ ಸೀಕ್ರೆಟ್ ನಿರ್ಬಂಧನೆ ಮಾಡಲಾಗಿದೆ. ಬಾಡಿಗೆದಾರರಿಗೆ 200 ಯೂನಿಟ್‌ಗೆ ಟೆನ್ಷನ್-ಎಸ್ಕಾಂಗಳಿಗೆ ಗೈಡ್ಲೈನ್  ತಲೆಬಿಸಿಯಾಗಿದೆ. ಗೃಹಜ್ಯೋತಿ ಮಾರ್ಗಸೂಚಿ ಯಲ್ಲಿ ಗೊಂದಲಗಳು ಒಂದೆರಡಲ್ಲ! ಬಾಡಿಗೆದಾರರಿಗೆ ಯೋಜನೆ ಅನ್ವಯ ಆಗುತ್ತಾ? ಅನ್ನೋ ಬಗ್ಗೆ ಮಾರ್ಗಸೂಚಿಯಲ್ಲಿ ಸ್ಪಷ್ಟ ಉಲ್ಲೇಖ ಇಲ್ಲ. ಹಾಗಿದ್ರೆ ಗೃಹಜ್ಯೋತಿ ಗೈಡ್ಲೈನ್  ಮರುಪರಿಷ್ಕರಣೆ ಮಾಡ್ತಾರಾ..? 

ಗೃಹಜ್ಯೋತಿ ಸ್ಕೀಂ ಗೈಡ್ ಲೈನ್ ನಲ್ಲಿ ಏನೆಲ್ಲಾ ಗೊಂದಲ..? ಬಾಡಿಗೆ ಮನೆ ಬದಲಾವಣೆ, ಹೊಸ ಮೀಟರ್ ಸಮಯದಲ್ಲಿ 12 ತಿಂಗಳ ಸರಾಸರಿ ಹೇಗೆ ಕೆಲಸ ಮಾಡುತ್ತದೆ….? ಗೃಹಜ್ಯೋತಿ ಫಲಾನುಭವಿ ಆಗಲು ಆಧಾರ್ ಲಿಂಕ್ ಅನ್ನು ಯಾವ ವೆಬ್‌ಸೈಟ್‌ನಲ್ಲಿ ಲಿಂಕ್‌ ಮಾಡಬೇಕು..? ಯಾವಾಗಿನಿಂದ ಆನ್ಲೈನ್ ಶುರು..? ಅದರ ಮಾಹಿತಿ ಎಲ್ಲಿದೆ..? ಮಾರ್ಗಸೂಚಿಯಲ್ಲಿ ಸಾಲು ಸಾಲು ಗೊಂದಲ ಹಿನ್ನೆಲೆ ಇಂದು ಸರ್ಕಾರ ಗೊಂದಲಗಳಿಗೆ ತೆರೆ ಎಳೆಯುತ್ತಾ? ಗೃಹಜ್ಯೋತಿ ಸ್ಕೀಂನಲ್ಲಿ ಭಾರೀ ಗೊಂದಲ ಹಿನ್ನೆಲೆ ಇಂದು ಇಂಧನ ಸಚಿವ ಕೆ ಜೆ ಜಾರ್ಜ್ ಸುದ್ದಿಗೋಷ್ಟಿ ನಡೆಸಲಿದ್ದಾರೆ.