ಮಧ್ಯಪ್ರದೇಶದ ಜಬಲ್‌ಪುರ ಜಿಲ್ಲೆಯ ಗ್ಯಾಸ್ ಫ್ಯಾಕ್ಟರಿಯೊಂದರಲ್ಲಿ ಗೂಡ್ಸ್ ರೈಲೊಂದು ಹಳಿ ತಪ್ಪಿದೆ. ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ. ಜಿಲ್ಲೆಯ ಶಹಪುರ ಭಿಟೋನಿ ನಿಲ್ದಾಣದ ಭಾರತ್ ಪೆಟ್ರೋಲಿಯಂ ಡಿಪೋ ಬಳಿ ಈ ಘಟನೆ ನಡೆದಿದೆ. ಮಾಹಿತಿ ಪಡೆದ ಕೂಡಲೇ ರೈಲ್ವೆ ಅಧಿಕಾರಿಗಳು ಅಪಘಾತ ಪರಿಹಾರ ವಾಹನದೊಂದಿಗೆ ತಡರಾತ್ರಿ ಸ್ಥಳಕ್ಕೆ ತಲುಪಿದರು. ಮಧ್ಯಪ್ರದೇಶದ ಜಬಲ್‌ಪುರ ಜಿಲ್ಲೆಯ ಗ್ಯಾಸ್ ಫ್ಯಾಕ್ಟರಿಯೊಂದರೊಳಗೆ ರೇಕ್‌ಗಳನ್ನು ಖಾಲಿ ಮಾಡಲು ಹೋದಾಗ ಗೂಡ್ಸ್ ರೈಲಿನಿಂದ ಎರಡು ವ್ಯಾಗನ್‌ಗಳು ಎಲ್‌ಪಿಜಿ ರೇಕ್‌ಗಳು ಹಳಿತಪ್ಪಿದವು.
ಜೂನ್ 2 ರಂದು ಒಡಿಶಾದ ಬಾಲಸೋರ್ನಲ್ಲಿ ತ್ರಿವಳಿ ರೈಲು ಅಪಘಾತ ಸಂಭವಿಸಿ ಇದುವರೆಗೆ 288 ಮಂದಿ ಮೃತಪಟ್ಟಿದ್ದು, ಸಾವಿರಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ.
ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಈ ಅಪಘಾತದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ. ತನಿಖೆಗೆ ಬಂದಿರುವ ಸಿಬಿಐ ಇದೀಗ ಮೂರು ರೈಲುಗಳ ನಡುವೆ ಡಿಕ್ಕಿ ಸಂಭವಿಸಿದ್ದು ಯಾವುದೋ ಪಿತೂರಿಯಿಂದ ನಡೆದಿದೆಯೇ ಎನ್ನುವ ಮಾಹಿತಿ ಕಲೆ ಹಾಕುತ್ತಿದೆ. 10 ಸದಸ್ಯರ ಸಿಬಿಐ ತಂಡ ಸೋಮವಾರ ಬಾಲಸೋರ್ ರೈಲು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಅಪಘಾತದ ತನಿಖೆ ಆರಂಭಿಸಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.