ಜೂನ್:04 ರಂದು ಹಳಿಯಾಳ ಪಟ್ಟಣದ ಕಿಲ್ಲಾದಲ್ಲಿರುವ ಮಾರೆಮ್ಮಾ ದೇವಿ ದೇವಸ್ಥಾನದಲ್ಲಿ ಹಿಂದೂ ಸಾಮ್ರಾಜ್ಯೋತ್ಸವ

ಹಳಿಯಾಳ : ಹಳಿಯಾಳ ಪಟ್ಟಣದ ಕಿಲ್ಲಾದಲ್ಲಿರುವ ಮಾರೆಮ್ಮಾ ದೇವಿ ದೇವಸ್ಥಾನದ ಆವರಣದಲ್ಲಿ ಇದೇ ಬರುವ ಜೂನ್:04 ರ ಭಾನುವಾರದಂದು ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಳಿಯಾಳ ಇವರ ಆಶ್ರಯದಡಿ ಶೋಭಾಕೃತ ಸಂವತ್ಸರ ಜೇಷ್ಟ ಮಾಸ ಶುಕ್ಲ ಪಕ್ಷ ಹಿಂದೂ ಸಾಮ್ರಾಜ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ನಿಗದಿತ ಸಮಯಕ್ಕಿಂತ 10 ನಿಮಿಷ ಮುಂಚಿತವಾಗಿ ದಂಡರಹಿತ ಪೂರ್ಣ ಗಣವೇಷದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಡಬೇಕೆಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಳಿಯಾಳ ತಾಲ್ಲೂಕು ಘಟಕವು ಮಾಧ್ಯಮಕ್ಕೆ ನೀಡಿದ ಪ್ರಕಟಣೆಯಲ್ಲಿ ವಿನಂತಿಸಿದೆ.