ಅಂಕೋಲಾ : ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ ನಿವೃತ್ತರಾದ ಕಛೇರಿ ಅಧೀಕ್ಷಕ ವಿ. ಎನ್. ನಾಯ್ಕ ಹಾಗೂ ದ್ವಿತೀಯ ದರ್ಜೆ ಸಹಾಯಕ ಕುಮಾರ ದುರ್ಗೇಕರ ಅವರನ್ನು ತಾಲುಕಾ ಆಸ್ಪತ್ರೆಯ ಪರವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಸಂತೋಷಕುಮಾರ ಅಧ್ಯಕ್ಷತೆ ವಹಿಸಿ ಮಾತನಾಡಿ ಆಸ್ಪತ್ರೆಯ ಅಭಿವೃದ್ಧಿ ಹಾಗೂ ಕಾರ್ಯನಿರ್ವಹಣೆಯಲ್ಲಿ ವಿ. ಎನ್. ನಾಯ್ಕ ಹಾಗೂ ಕುಮಾರ ದುರ್ಗೇಕರವರ ಪಾತ್ರ ಮಹತ್ತರವಾಗಿದೆ. ಉತ್ತಮ ಕರ್ತವ್ಯದೊಂದಿಗೆ ಸಮಾಜಮುಖಿಯಾದ ಇವರ ಸೇವೆ ಮಾದರಿಯಾಗಿದೆ ಎಂದರು.
ತಜ್ಞ ವೈದ್ಯ ಡಾ. ಈಶ್ವರಪ್ಪ ಮಾತನಾಡಿ ಇಲಾಖಾ ಸೇವೆಯಲ್ಲಿ ಸಿಬ್ಬಂದಿಗಳ ಸಹಕಾರವಿದ್ದಲ್ಲಿ ಮಾತ್ರ ಆಡಳಿತ ನಿರ್ವಹಣೆ ಸುಲಭ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ವಿ.ಎನ್.ನಾಯ್ಕ ಹಾಗೂ ಕುಮಾರ ದುರ್ಗೇಕರ ಅವರಿಗೆ ಉತ್ತಮ ಸೇವೆ ನೀಡಿದ ಕೀರ್ತಿ ಸಲ್ಲುತ್ತದೆ ಎಂದರು.
ತಜ್ಞ ವೈದ್ಯರಾದ ಡಾ. ಅನುಪಮಾ ನಾಯಕ, ಡಾ. ರಾಜೇಶ ನಾಯಕ ಡಾ. ರಮೇಶ ಸಿ, ಡಾ. ಗೀರಿಶ ಭೂತೆ, ಡಾ. ನಿಕಿತಾ ಪೂಜಾರಿ, ಡಾ. ಡಿ ಶೃತಿ, ವೈದ್ಯಾಧಿಕಾರಿಗಳಾದ ಡಾ. ಸಹನಾ, ಡಾ. ಸಲೋನಿ, ಡಾ. ಸೌಮ್ಯ, ಸಹಾಯಕ ಆಡಳಿತಾಧಿಕಾರಿ ಬಬಿತಾ ತಳೇಕರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು
ಶುಶ್ರೂಷಕ ಅಧೀಕ್ಷಕಿ ದೇವಕಿ ನಾಯ್ಕ ಸ್ವಾಗತಿಸಿದರು, ನೇತ್ರಾಧಿಕಾರಿ ರೂಪಾ ಸೇಂದ್ರೆ ಹಾಗೂ ಆಪ್ತಸಮಾಲೋಚಕಿ ರಾಜಶ್ರಿ ಕಿರ್ಲೋಸ್ಕರ ಸನ್ಮಾನಿತರನ್ನು ಪರಿಚಯಿಸಿದರು.
ಶುಶ್ರೂಷಕಾಧಿಕಾರಿ ಗಿರಿಜಾ ಗೌಡ, ಪ್ರಥಮ ದರ್ಜೆ ಸಹಾಯಕ ಪ್ರಶಾಂತ ಗಾಂವಕರ, ಶುಶ್ರೂಷಕಾಧಿಕಾರಿ ನಿರ್ಮಲಾ ಸಾವಂತ, ವಾಹನ ಚಾಲಕ ಪಕ್ಕೀರೇಶ ಪೂಜಾರ, ಸಿಬ್ಬಂದಿಗಳಾದ ನಿತ್ಯಾನಂದ ನಾಯ್ಕ, ನೇತ್ರಾ ಶಿರಾಲಿಕರ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಕ್ಷ ಕಿರಣ ತಂತ್ರಜ್ಞಾಧಿಕಾರಿ ವಂದಿಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆ ಶುಶ್ರೂಷಕಾಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.