ಪುಷ್ಕಳ ಮೀನೂಟದ ಋುತುಮಾನ: 2022-23ರ ಮೀನುಗಾರಿಕೆ ಋುತುವಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಪರ್‌ ಮೀನುಗಾರಿಕೆ

ತತ್ಪರಿಣಾಮ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಮೀನಿನ ದರ ತೀರ ಅಗ್ಗವಾಗಿತ್ತು. ಬಂಗುಡೆ ಮೀನಂತೂ ಯಥೇಚ್ಛವಾಗಿ ದೊರೆತಿದ್ದು, ನೂರು ರು.ಗೆ 20-30 ಮೀನು ದೊರೆಯುತ್ತಿತ್ತು. ಮೀನು ಗ್ರಾಹಕರಿಗೆ ಇದು ಹಬ್ಬದ ಸಮಯವಾದರೂ, ಮಾರುಕಟ್ಟೆಮೌಲ್ಯ ತೀರ ಕುಸಿದಿದ್ದರಿಂದ ಮೀನುಉದ್ಯಮ ನಷ್ಟಕ್ಕೆ ಒಳಗಾಗಿತ್ತು.

2020-21ನೇ ಸಾಲಿನಲ್ಲಿ 1924.51 ಕೋಟಿ ರು. ಮೊತ್ತದ 1,39,714.04 ಮೆಟ್ರಿಕ್‌ ಟನ್‌ ಮೀನು ಲಭ್ಯವಾಗಿದ್ದರೆ, 2021-22ನೇ ಸಾಲಿನಲ್ಲಿ 3801.60 ಕೋಟಿ ರು. ಮೊತ್ತದ 2,91,812 ಮೆಟ್ರಿಕ್‌ ಟನ್‌ ಮೀನುಗಾರಿಕೆ ನಡೆದಿತ್ತು. 2022-23ರಲ್ಲಿ 4154.80 ಕೋಟಿ ರು. ಮೊತ್ತದ 3,33,537.05 ಮೆಟ್ರಿಕ್‌ ಟನ್‌ ಮೀನುಗಾರಿಕೆ ನಡೆದಿದೆ.