ರಾಯಚೂರು: ಚಲಿಸುತ್ತಿದ್ದ 108 ಆಂಬುಲೆನ್ಸ್(Ambulance) ವಾಹನದಲ್ಲಿಯೇ ತಾಯಿ ಮಗುವಿಗೆ ಜನ್ಮ(Birth) ನೀಡಿದ್ದಾರೆ. ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಕುರುಕುಂದ ಗ್ರಾಮದ ಬಳಿ ಹೆರಿಗೆಯಾಗಿದೆ. ಹೆರಿಕೆ ನೋವು ಕಾಣಿಸಿಕೊಂಡ ಹಿನ್ನೆಲೆ ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಆದ್ರೆ ಮಾರ್ಗ ಮಧ್ಯೆ ನೋವು ಹೆಚ್ಚಾದ ಕಾರಣ ಆಂಬುಲೆನ್ಸ್ ವಾಹನದಲ್ಲಿಯೇ ಹೆರಿಗೆ ಮಾಡಲಾಗಿದೆ. ಗರ್ಭಿಣಿ ಮಹಿಳೆ ಆರೋಗ್ಯಕರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ನಿನ್ನೆ(ಮೇ 31) ತಡ ರಾತ್ರಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಇದೇ ಗ್ರಾಮದ ರೇಣುಕಾ ವಿರೇಶ್ ಎಂಬ ಗರ್ಭಿಣಿ ಮಹಿಳೆಯನ್ನು 108 ಮೂಲಕ ಸಿರವಾರ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಮಾರ್ಗ ಮಧ್ಯೆ ರೇಣುಕಾಳ ಹೆರಿಗೆ ನೋವು ತೀವ್ರಗೊಂಡಿದ್ದು ಮಾರ್ಗ ಮಧ್ಯೆಯೇ ಶುಶ್ರೂಷಕಿ ಲಕ್ಷ್ಮೀ ಅವರು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಆಂಬುಲೆನ್ಸ್ ವಾಹನದಲ್ಲಿಯೇ ರೇಣುಕಾಳ ಹೆರಿಗೆ ಮಾಡಿಸಿದ್ದಾರೆ. ಆಂಬುಲೆನ್ಸ್ ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮಗುವನ್ನು ಸಿರವಾರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿದೆ. ಅಂಬುಲೆನ್ಸ್ ನಲ್ಲಿ ಹೆರಿಗೆ ಮಾಡಿಸಿದ ಶುಶ್ರೂಷಕಿ ಲಕ್ಷ್ಮೀ ಹಾಗೂ ಚಾಲಕ ಯಾಸಿನ್ಗೆ ಸ್ಥಳೀಯರು ಶ್ಲಾಘಿಸಿದ್ದಾರೆ.
ಆಂಬ್ಯುಲೆನ್ಸ್ಗೆ ಕೊಡಲು ಹಣವಿಲ್ಲದೆ ಮಗನ ಶವವನ್ನು ಚೀಲದೊಳಗೆ ಹೊತ್ತು 200 ಕಿ.ಮೀ ಪ್ರಯಾಣಿಸಿದ ವ್ಯಕ್ತಿ
ವಲಸೆ ಕಾರ್ಮಿಕರೊಬ್ಬರು ಆಂಬ್ಯುಲೆನ್ಸ್ಗೆ ಕೊಡಲು ಹಣವಿಲ್ಲದೆ ಮಗನ ಶವವನ್ನು ಚೀಲದೊಳಗೆ ಹಾಕಿ 200 ಕಿ.ಮೀಗಳಷ್ಟು ದೂರ ಪ್ರಯಾಣಿಸಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಪಶ್ಚಿಮ ಬಂಗಾಳದ ಮುಸ್ತಫಾನಗರ ಗ್ರಾಮಪಂಚಾಯತ್ನ ಡಂಗಿಪಾರಾ ಗ್ರಾಮದ ವಲಸೆ ಕಾರ್ಮಿಕ ಅಸೀಂ ದೇವಶರ್ಮಾ, ಆಂಬ್ಯುಲೆನ್ಸ್ ಚಾಲಕ ಕೇಳಿದ ಶುಲ್ಕವನ್ನು ಭರಿಸಲು ಸಾಧ್ಯವಾಗದ ಕಾರಣ ಶವವನ್ನು ಹೊತ್ತುಕೊಂಡು 200 ಕಿ.ಮೀ ದೂರ ಸಾಗಿದ್ದಾರೆ. ಕಣ್ಣೀರು ತಡೆದುಕೊಂಡು ಬಸ್ ಹತ್ತಿದ್ದರು, ಬಸ್ನಲ್ಲಿ ಯಾರಿಗೂ ತಿಳಿಯದಂತೆ ಎಚ್ಚರವಹಿಸಿದ್ದರು, ಒಂದೊಮ್ಮೆ ಹೇಳಿಬಿಟ್ಟರೆ ತಮ್ಮನ್ನು ಬಸ್ಸಿನಿಂದ ಇಳಿಸಬಹುದು ಎನ್ನುವ ಭಯವಿತ್ತು ಎಂದು ಹೇಳಿಕೊಂಡಿದ್ದಾರೆ.