ಹುಬ್ಬಳ್ಳಿ: ‘ಕಾಂಗ್ರೆಸ್ ಪಾರ್ಟಿಗೆ ಅನ್ ಕಂಡೀಷನ್ ಆಗಿ ಬಂದಿದ್ದೇನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು. ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ‘ಕ್ಯಾಬಿನೆಟ್ನಲ್ಲಿ ನಾನು ಮಿನಿಸ್ಟರ್ ಆಗಬೇಕು ಅನ್ನೋದು ಜನರ ಅಭಿಲಾಷೆ ಇತ್ತು. ಹಲವು ಕಾರಣದಿಂದ ಆಗಿಲ್ಲ. ಇನ್ನು ಹಲವಾರು ಸ್ಥಾನಮಾನಗಳಿವೆ. ಯಾವುದೇ ಸ್ಥಾನ ಕೊಟ್ರು, ನಿಭಾಯಿಸಿಕೊಂಡು ಹೋಗುತ್ತೇನೆ. ಈಗಿನ ಸಂಪುಟ ರಚನೆ ನಂತರ ಕೂತು ಚರ್ಚಿಸುವ ಬಗ್ಗೆ ಮಾತಾಗಿದೆ. ವೈಯಕ್ತಿಕವಾಗಿ ನಾನು ಯಾವುದೇ ಆಸೆ ವ್ಯಕ್ತಪಡಿಸಿಲ್ಲ. ‘ನನ್ನೊಬ್ಬನನ್ನ ಸೋಲಿಸಲು ಹೋಗಿ ಬಿಜೆಪಿ ತಾನೇ ಸೋತಿದೆ. ‘ನಾನು ಕಾಂಗ್ರೆಸ್ ಸೇರೋ ಸಮಯದಲ್ಲಿ ಹೇಳಿರೋ ಪ್ರಶ್ನೆಗೆ ಇದುವರೆಗೂ ಬಿಜೆಪಿಯವರು ಯಾರೂ ಉತ್ತರ ಕೊಟ್ಟಿಲ್ಲ. ಬಿಜೆಪಿಯವರು ಎಲ್ಲಿದಾರೆ? ಗೊತ್ತಿಲ್ಲ. ಪರೋಕ್ಷವಾಗಿ ಬಿಎಲ್ ಸಂತೋಷ್ ವಿರುದ್ದ ಶೆಟ್ಟರ್ ಟಾಂಗ್ ಕೊಟ್ಟಿದ್ದಾರೆ. ಇನ್ನು ನಾನು ಯಾವ ರೀತಿ ಮುಂದೆ ಹೋಗಬೇಕು ಎಂಬ ಬಗ್ಗೆ ಕಾಂಗ್ರೆಸ್ ತೀರ್ಮಾನ ಮಾಡುತ್ತೆ. ಕಾಂಗ್ರೆಸ್ ಗೆ ಜನ ಬೆಂಬಲ ನೀಡಿದ್ದಾರೆ ಎಂದರು.

ಒತ್ತಡದಲ್ಲಿ ಸ್ಥಾನಮಾನ ಕೊಡಲು ಆಗಲಿಲ್ಲ. ಲೋಕಸಭಾ ಚುನಾವಣೆಗೆ ಇನ್ನು ಒಂದು ವರ್ಷ ಇದೆ. ಕಾಂಗ್ರೆಸ್ ಯಾವ ಜವಾಬ್ದಾರಿ ನೀಡುತ್ತೆ ಅದನ್ನ ನಿಭಾಯಿಸುತ್ತೇನೆ. ಉತ್ತರ ಕರ್ನಾಟಕ ಭಾಗದ ನಾಯಕರಿಗೆ ಕೆಲವು ಪ್ರಮುಖ ಸ್ಥಾನ ಸೀಗುವ ಮೂಲಕ ಸಾಕಷ್ಟು ಅವಕಾಶಗಳಿವೆ. ಮುಂದಿನ ಕ್ಯಾಬಿನೆಟ್ ನಲ್ಲಿ ಒಂದು ನಿರ್ಧಾರ ಮಾಡ್ತೇವೆ ಎಂದಿದ್ದಾರೆ. ಗ್ಯಾರೆಂಟಿ ಅನುಷ್ಠಾನ ಮಾಡಲು ಸ್ವಲ್ಪ ಸಮಯ ಬೇಕಾಗುತ್ತೆ. ಪ್ರತಿಪಕ್ಷ ಅದನ್ನ ರಾಜಕೀಯವಾಗಿ ಬಳಸಿಕೊಳ್ತಾ ಇದ್ದಾರೆ. ಹೊಸ ಸರ್ಕಾರ ಬಂದಿದ್ದು, ರಾಜಕಾರಣದಲ್ಲಿ ತಾಳ್ಮೆ ಬೇಕಾಗುತ್ತೆ ಎಂದಿದ್ದಾರೆ.
ಇನ್ನು ನೂತನ ಸಂಸತ್ ಉದ್ಘಾಟನೆಗೆ ರಾಷ್ಟಪತಿಯನ್ನು ಕರಿಯಬೇಕಿತ್ತು. ನಾನು ಸುವರ್ಣ ಸೌಧ ಉದ್ಘಾಟನೆ ಮಾಡುವ ಅವಕಾಶ ಬಂದಿತ್ತು. ಆಗ ನಾನು ಅಂದಿನ ರಾಷ್ಟಪತಿಯಾಗಿದ್ದ ಪ್ರಣವ್ ಮುಖರ್ಜಿ ಅವರನ್ನು ಕರದಿದ್ದೇ. ರಾಷ್ಟಪತಿಗಳನ್ನು ಕರೆಯಬೇಕು ಎಂದು ಪ್ರತಿ ಪಕ್ಷಗಳು ಹೇಳ್ತಿರೋದ ಸರಿಯಾಗಿದೆ. ಇನ್ನು ಶೆಟ್ಟರ್ ಸೋಲಿಗೆ ಕಾರಣ ವಿಚಾರ ‘ಸೋಲಿಗೆ ಕಾರಣವಾದದ್ದು, ಬಹಿರಂಗವಾಗಿ ಚರ್ಚೆ ಮಾಡುವುದಿಲ್ಲ. ಜೊತೆಗೆ ಹಿರಿಯ ನಾಯಕರೊಂದಿಗೆ ಈ ಕುರಿತು ಚರ್ಚೆ ಆಗಿಲ್ಲ. ಸವದಿ ಹಾಗೂ ನನಗೂ ಸಚಿವ ಸ್ಥಾನ ಸಿಗಬೇಕಿತ್ತು. ಆದರೆ, ಆಗಿಲ್ಲ. ಬಿಜೆಪಿಯಲ್ಲಿ ಪಕ್ಷ ಕಟ್ಟುವಂತವರು ಯಾರಿದ್ದಾರೆ?, ಇದುವರೆಗೂ ವಿರೋಧ ಪಕ್ಷದ ನಾಯಕನ ಆಯ್ಕೆಯಾಗಿಲ್ಲ. ರಾಷ್ಟ್ರೀಯ ಪಕ್ಷಕ್ಕೆ ಇಂತಹ ಪರಿಸ್ಥಿತಿ ಬರಬಾರದಿತ್ತು. ಇನ್ನು ಭಜರಂಗದಳವನ್ನ ಬ್ಯಾನ್ ವಿಚಾರ ಕುರಿತು ‘ಯಾರಾದರೂ ಬ್ಯಾನ್ ಮಾಡಿದ್ದಾರ? ನಾನು ಕಾಂಗ್ರೆಸ್ ಸರ್ಕಾರದ ವಕ್ತಾರ ಅಲ್ಲ, ಎಲ್ಲವುದಕ್ಕೂ ಉತ್ತರಿಸಲು ಎಂದು ಶೆಟ್ಟರ್ ಗರಂ ಆಗಿ ಉತ್ತರಿಸಿದ್ದಾರೆ.


