ಅಂಜುಮನ್‌ ಸಂಸ್ಥೆಯಲ್ಲಿ ಹೊಸದಾಗಿ ಸೇರಿಕೊಂಡ 3 ಕೋರ್ಸಗಳು.

ಭಟ್ಕಳ್: ಅಂಜುಮನ್‌ ಇನ್ಸ್‌ಟಿಟ್ಯೂಟ್ ಆಫ್‌ ಟೆಕ್ನಾಲಜಿ ಎಂಡ್‌ ಮ್ಯಾನೇಜ್‌ಮೆಂಟ್‌ ಕಾಲೇಜಿನಲ್ಲಿ ಪ್ರಸಕ್ತ ಶಿಕ್ಷಣ ವರ್ಷದಿಂದ ನೂತನವಾಗಿ 3 ಹೊಸ ಕೋರ್ಸುಗಳನ್ನು ಪರಿಚಯಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಭಟ್ಕಳ ಅಂಜುಮನ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮುಜಾಮಿಲ್‌ ಖಾಜೀಯಾ ಹೇಳಿದರು.

ಅವರು ಭಟ್ಕಳ್‌ ಅಂಜುಮನ್‌ ಇಂಜಿನಿಯರಿಂಗ ಕಾಲೇಜಿನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಕಂಪ್ಯೂಟರ್‌ ಸೈನ್ಸ್‌ ಇಂಜನಿಯರಿಂಗ ಇನ್‌ ಆರ್ಟಿಪಿಶಿಯಲ್‌ ಇಂಟಲಿಜೆನ್ಸಿ ಆಂಡ್‌ ಮಷಿನ್‌ ಲರ್ನಿಂಗ್‌, ಕಂಪ್ಯೂಟರ್‌ ಸೈನ್ಸ್‌, ಇಂಜನಿಯರಿಂಗ ಇನ್‌ ಡಾಟಾ ಸೈನ್ಸ್‌ ನೂತನ ಪಠ್ಯಗಳನ್ನು ಕಂಪ್ಯೂಟರ್‌ ಸೈನ್ಸ್‌ ವಿಭಾಗದಲ್ಲಿ ಪರಿಚಯಿಸಲಾಗುತ್ತದೆ. ಈ ವಿಷಯಗಳಿಗೆ ಜಗತ್ತಿನಲ್ಲಿ ಹೆಚ್ಚಿನ ಬೇಡಿಕೆಯಿದ್ದು, ಸಾಫ್ಟವೇರ್‌ ಇಂಜನಿಯರಗಳಿಗೆ ಇನ್ನಷ್ಟು ಶಕ್ತಿ ಮತ್ತು ಚೈತನ್ಯವನ್ನು ನೀಡುತ್ತದೆ. ಜೊತೆಗೆ ಇಂಜನಿಯರಿಂಗ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗವಕಾಶಗಳು ಲಭ್ಯವಾಗಲಿವೆ. ಜಿಲ್ಲೆಯಲ್ಲಿ ಮೊದಲ ಬಾರಿಗೆ ವಿದ್ಯಾರ್ಥಿಗಳಿಗೆ ಈ 2 ಹೊಸ ಕೋರ್ಸಗಳ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

ಈ ಎರಡು ಇಂಜನಿಯರಿಂಗ ಕೋರ್ಸ್‌ ಜೊತೆಗೆ ಈ ಶೈಕ್ಷಣೀಕ ವರ್ಷದಿಂದ ಎಮ್‌.ಎ ( ಮಾಸ್ಟರ್‌ ಆಫ್‌ ಕಂಪ್ಯೂಟರ್‌ ಅಪ್ಲಿಕೇಶನ್‌ ) ಸ್ನಾತಕೋತ್ತರ ಅಧ್ಯಯನ ತರಗತಿಯನ್ನು ಪ್ರಾರಂಭಿಸಲಾಗುತ್ತದೆ. ಉತ್ತರ ಕನ್ನಡ ಮಾತ್ರವಲ್ಲ ಅಕ್ಕಪಕ್ಕದ ಜಿಲ್ಲೆ, ರಾಜ್ಯಗಳ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಪ್ರಧಾನ ಕಾರ್ಯದರ್ಶಿ ಸಿದ್ದಿಕ್ ಇಸ್ಟೈಲ್ ವಿನಂತಿಸಿಕೊಂಡರು…