ಸಿಎಂ ಪ್ರಮಾಣವಚನ ಸಮಾರಂಭದ ಬಳಿಕ ಸಂಗ್ರಹವಾಯ್ತು ಟನ್ಗಟ್ಟಲೆ ಕಸ

ಬೆಂಗಳೂರು: ಶನಿವಾರ (ಮೇ.20) ರಂದು ನಗರದ ಕಂಠೀರವ ಕ್ರೀಡಾಂಗಣದಲ್ಲಿ (Kanteerava Sports Ground) ನಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಅವರ ಅದ್ಧೂರಿ ಪ್ರಮಾಣ ವಚನ (Swearing in Ceremony) ಸಮಾರಂಭದಲ್ಲಿ ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಸಮಾರಂಭ ಮುಗಿದ ಬಳಿಕ ಕ್ರೀಡಾಂಗಣದ ಸುತ್ತಲಿನ ರಸ್ತೆಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಪ್ಯಾಕೆಟ್‌ಗಳು, ಬಾಟಲಿಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಂಗ್ರಹಿಸಲಾಗಿದೆ. ಅಧಿಕಾರಿಗಳ ಪ್ರಕಾರ, ಕ್ರೀಡಾಂಗಣದ ಬಳಿ 15 ಟನ್ ತ್ಯಾಜ್ಯ ಸಂಗ್ರಹವಾಗಿದೆ. ಇನ್ನು ಬೀದಿಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಪ್ಯಾಕೆಟ್‌ಗಳು, ಬಾಟಲಿಗಳ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ಈ ಕಾರ್ಯಕ್ರಮದಲ್ಲಿ ಸುಮಾರು 1.2 ಲಕ್ಷ ಜನರು ಭಾಗವಹಿಸಿದ್ದರು. ನಾವು 50 ಡಸ್ಟ್‌ಬಿನ್‌ಗಳನ್ನು ಇರಿಸಿದ್ದೇವು. ಆದರೂ ಕೂಡ ಸಾಕಷ್ಟು ಕಸದ ರಾಶಿ ಇತ್ತು. ಮಜ್ಜಿಗೆ ಪ್ಯಾಕೆಟ್‌ಗಳು, ಪ್ಲಾಸ್ಟಿಕ್ ನೀರು ಮತ್ತು ಜ್ಯೂಸ್ ಬಾಟಲಿಗಳು, ಟೆಟ್ರಾ ಪ್ಯಾಕ್‌ಗಳು ಹೆಚ್ಚಾಗಿ ಸಂಗ್ರಹಿಸಲಾಗಿದೆ ಎಂದು ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣಾ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಲ್ಲದೇ ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ ಸುರಿದ ಭಾರೀ ಮಳೆಯೂ ತ್ಯಾಜ್ಯ ಸಂಗ್ರಹಕ್ಕೆ ಕಾರಣವಾಯಿತು. ಬಿರುಗಾಳಿ ಸಹಿತ ಮಳೆಗೆ ಮರದ ಕೊಂಬೆಗಳು ಮುರಿದು ಬಿದ್ದಿದ್ದವು. ಇದು ಕೂಡ ಸಂಗ್ರಹವಾದ ದೊಡ್ಡ ಪ್ರಮಾಣದ ಕಸವಾಗಿದೆ ಎಂದು ಹೇಳಿದ್ದಾರೆ.

ಇದಲ್ಲದೆ, ಕ್ವೀನ್ಸ್ ರಸ್ತೆಯಲ್ಲಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಚೇರಿ ಬಳಿ ಸುಮಾರು 3 ಟನ್ ಕಸ ಸಂಗ್ರಹಿಸಲಾಯಿತು. ಅಂದು ಹೆಚ್ಚಿನ ತ್ಯಾಜ್ಯ ಉತ್ಪತ್ತಿಯಾಗುವ ನಿರೀಕ್ಷೆಯಿತ್ತು. ಈ ಹಿನ್ನೆಲೆ ವಲಯ ಬಿಬಿಎಂಪಿ ಅಧಿಕಾರಿಗಳು ಹೆಚ್ಚುವರಿ ಕಾಂಪ್ಯಾಕ್ಟರ್ ಸಿದ್ಧಪಡಿಸಿದ್ದರು. “ನಾವು ಶನಿವಾರದಂದು ಮಿಶ್ರಿತ (ವಣ ಮತ್ತು ಹಸಿ ತ್ಯಾಜ್ಯ) ಸಂಗ್ರಹಿಸಿದ್ದೇವೆ ಎಂದರು.
ಬ್ಯಾನರ್ ಮತ್ತು ಕಟೌಟ್‌ಗಳನ್ನು ಹಾಕಲು ಟೆಂಡರ್ ಪಡೆದಿದ್ದ ಕಂಪನಿಯು ಅವುಗಳನ್ನು ತೆರುವುಗೊಳಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರಿಂದ ಬಿಬಿಎಂಪಿಗೆ ಸ್ವಲ್ಪ ಕೆಲಸ ಕಡಿಮೆಯಾಗಿದೆ. ಸಮಾರಂಭದಲ್ಲಿ ಬೃಹತ್ ಪ್ರಮಾಣದ ಹೂವುಗಳನ್ನು ಸಹ ಬಳಸಲಾಯಿತು. ಈ ಹೂವುಗಳನ್ನು ಮಹಿಳೆಯೊಬ್ಬರು ಸ್ವಯಂಪ್ರೇರಿತವಾಗಿ ಸಂಗ್ರಹಿಸಿದ್ದು, ಅಗರಬತ್ತಿಯ ಸುಗಂಧಕ್ಕಾಗಿ ಮರುಬಳಕೆ ಮಾಡುತ್ತಾರೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ.