ಜಲ ಜೀವನ್ ಮಿಷನ್ ಯೋಜನೆ ಮೂಲಕ 12 ಕೋಟಿ ಗ್ರಾಮೀಣ ಕುಟುಂಬಗಳಿಗೆ ನಲ್ಲಿ ನೀರು ಸರಬರಾಜು

ಜಲ ಜೀವನ್ ಮಿಷನ್ (Jal Jeevan Mission) 12 ಕೋಟಿ ಗ್ರಾಮೀಣ ಕುಟುಂಬಗಳಿಗೆ ನಲ್ಲಿ ನೀರು ಸರಬರಾಜು ಮಾಡುವ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. 2024 ರ ವೇಳೆಗೆ ಪ್ರತಿ ಗ್ರಾಮೀಣ (rural households) ಮನೆಗಳಿಗೂ ಖಚಿತವಾದ ನಲ್ಲಿ ನೀರು ಸರಬರಾಜು (Drinking Water) ಮಾಡುವ ಗುರಿಯೊಂದಿಗೆ 2019 ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ಮಿಷನ್ ಅನ್ನು ಘೋಷಿಸಿದರು. ಮಿಷನ್ ಘೋಷಣೆಯ ಪ್ರಕಾರ, ಹಳ್ಳಿಗಳಲ್ಲಿ ಕೇವಲ ಮೂರು ಕೋಟಿ 23 ಲಕ್ಷ ಕುಟುಂಬಗಳು ಮಾತ್ರ ಪೈಪ್ ನೀರಿನ ಸಂಪರ್ಕವನ್ನು ಹೊಂದಿದ್ದವು. ಇಲ್ಲಿಯವರೆಗೆ ಐದು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳು 100 ಪ್ರತಿಶತ ವ್ಯಾಪ್ತಿಯನ್ನು ವರದಿ ಮಾಡಿವೆ ಎಂದು ಜಲಶಕ್ತಿ ಸಚಿವಾಲಯ ತಿಳಿಸಿದೆ. ಈ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಗೋವಾ, ತೆಲಂಗಾಣ, ಹರಿಯಾಣ, ಗುಜರಾತ್, ಪಂಜಾಬ್, ಪುದುಚೇರಿ, ದಮನ್ ಮತ್ತು ದಿಯು ಮತ್ತು ದಾದ್ರಾ ಮತ್ತು ನಗರ ಹವೇಲಿ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅವಿರತ ಪ್ರಯತ್ನಗಳು ದೇಶದ ಒಂಬತ್ತು ಲಕ್ಷ ಶಾಲೆಗಳು ಮತ್ತು ಒಂಬತ್ತು ಲಕ್ಷದ 39 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಟ್ಯಾಪ್ ನೀರು ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಕಾರಣವಾಗಿದೆ ಎಂದು ಸಚಿವಾಲಯ ಹೇಳಿದೆ.