ಬೆಂಗಳೂರು: ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಜೋರಾಗಿದೆ.ಮತ ಸಮರದಲ್ಲಿ ಗೆಲ್ಲುವ ಹುಮ್ಮಸ್ಸಿನಿಂದ ಇಲ್ಲಿನ ಅಭ್ಯರ್ಥಿಯೊಬ್ಬರು ಎಡವಟ್ಟು ಮಾಡಿಕೊಂಡ್ರಾ ಅನ್ನೋ ಅನುಮಾನ ಕಾಡತೊಡಗಿದೆ.ಇದಕ್ಕೆ ಕಾರಣವಾಗಿದ್ದು 17 ನಿಮಿಷದ ವಿಡಿಯೋ. ಈ ವಿಡಿಯೋ ಕ್ಷೇತ್ರದಲ್ಲಿ ಬಾರಿ ಚರ್ಚೆಗೆ ಕಾರಣವಾಗಿದೆ.
ಯಲಹಂಕ ಜೆಡಿಎಸ್ ಅಭ್ಯರ್ಥಿ ಮುನೇನಗೌಡ ಹಾಗೂ ಜೆಡಿಎಸ್ ವಕ್ತಾರ ಚರಣಗೌಡ ನೆಡೆಸಿದ್ದಾರೆ ಎನ್ನಲಾದ ವಿಡಿಯೋ ತುಣುಕು ಹೊರಬಂದಿದೆ.ಮುನೇನಗೌಡ ತಾವೇ ತಮ್ಮ ಹುಡಗರಿಂದ ಕಿಡ್ನ್ಯಾಪ್ ಆಗಿ ಅದನ್ನು ಬಿಜೆಪಿ ಅಭ್ಯರ್ಥಿ ವಿಶ್ವನಾಥ ನೆಡೆಸಿದ್ದಾರೆಂದು ಸುಳ್ಳು ಆರೋಪ ಹೊರಿಸಲು ತಯಾರಿ ನೆಡೆಸಿದ್ದಾಗಿ ಬಿಜೆಪಿ ಗಂಬೀರವಾಗಿ ಆರೋಪ ಮಾಡಿದೆ.
ವಿಡಿಯೋದಲ್ಲಿ ಏನಿದೆ?
ಮುನೇನಗೌಡ ಹಾಗೂ ಚರಣಗೌಡ ಅನಾಮಧೇಯ ವ್ಯಕ್ತಿಯೊಂದಿಗೆ ಚರ್ಚೆ ನೆಡೆಸಿದ್ದಾರೆ ಎನ್ನಲಾದ ವಿಡಿಯೋದಲ್ಲಿ ಮೇ 5 ಅಥವಾ 6 ರಂದು ಕಿಡ್ನ್ಯಾಪ್ ತಂತ್ರದ ಬಗ್ಗೆ ಚರ್ಚಿಸಲಾಗಿದೆ.ಅಪಹರಣದ ನಂತರ ಹೊಸುರ ರಸ್ತೆಯ ಫಾರ್ಮ್‌ಹೌಸ್‌ನಲ್ಲಿ ಎರಡ್ಮೂರ ದಿನ ಉಳಿದುಕೊಳ್ಳುವ ಬಗ್ಗೆ ಮಾತುಕತೆಯಾಗಿದೆ.ಕಿಡ್ನ್ಯಾಪ್ ಆದ ನಂತರ ಮೋಬೈಲ್ ಸ್ವೀಚ್‌ಆಫ್ ಮಾಡಿಕೊಳ್ಳುವ ಹಾಗೂ ಹಲವು ತಂತ್ರದ ಬಗ್ಗೆ ಮಾತುಕತೆಯಾಗಿದೆ.
ಮೇ 7ರಂದು ನೆಡೆಯುವ ಜೆಡಿಎಸ್ ಸಮಾವೇಶಕ್ಕೆ ಗೈರಾಗುವ ಮೂಲಕ ಮತದಾರರ ಅನುಕಂಪ ಗಿಟ್ಟಿಸಿಕೊಳ್ಳುವ ಪ್ಲಾನ್ ಮಾಡಲಾಗಿತ್ತು.ಇದರ ಜೊತೆಗೆ ಸಿಂಗನಾಯಕನಹಳ್ಳಿ ಮುನೇನಗೌಡ ಪತ್ನಿ ಹಾಗೂ ಭಾವ, ಮೈದುನನ್ನು ಪ್ರಚಾರಕ್ಕೆ ಕಳುಹಿಸಿ ತಮ್ಮವರಿಂದಲೇ ಅವರಿಗೆ ಹಲ್ಲೆ ನೆಡೆಸಿ ಅದನ್ನು ಬಿಜೆಪಿಗರ ತೆಲೆಗೆ ಕಟ್ಟುವ ಬಗ್ಗೆ ಮಾತುಕತೆ ನೆಡೆಸಿರುವುದು ವಿಡಿಯೋದಲ್ಲಿದೆ. ಬಿಜೆಪಿ ಅಭ್ಯರ್ಥಿ ವಿಶ್ವನಾಥ ವಿಡಿಯೋ ಆಧರಿಸಿ ಪೋಲಿಸರಿಗೆ ದೂರು ನೀಡಲು ಮುಂದಾಗಿದ್ದಾರೆ.
ಚುನಾವಣೆಯನ್ನು ನೇರವಾಗಿ ಎದುರಿಸುವುದು ಬಿಟ್ಟು ಹೀಗೆ ಅಡ್ಡದಾರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೆಂಡತಿಯನ್ನು ಮುಂದಿಟ್ಟುಕೊಂಡು ಇಂತಹ ಕೆಲಸ ಮಾಡುತ್ತಿದ್ದಾರೆ. ಈ ಕುರಿತು ರಾಜನಕುಂಟೆ ಪೋಲಿಸ್ ಠಾಣೆಗೆ ದೂರು ನೀಡ್ತೇನೆ ಎಂದು ವಿಶ್ವನಾಥ ಹೇಳಿದ್ದಾರೆ