ಹೊಸ ‘ಡ್ರೋನ್’ ತಯಾರಿಸುತ್ತಿದ್ದಾನಾ ಪ್ರತಾಪ್.? ಸೋಲ್ಡರ್ ಗನ್ ಹಿಡಿದು ಪೋಸ್ ಕೊಟ್ಟ ನಕಲಿ ವಿಜ್ಞಾನಿಯ ಹೊಸ ಸಾಹಸ.!

ಬೆಂಗಳೂರು: ಡ್ರೋನ್ ಪ್ರತಾಪ್. ಇತ್ತೀಚಿನ ದಿನಗಳಲ್ಲಿ ಅಷ್ಟಾಗಿ ಸುದ್ದಿಯಾಗದ ಪ್ರತಾಪ ಇದೀಗ ಮತ್ತೆ ಸದ್ದು ಮಾಡಿ ಸುದ್ದಿಯಲ್ಲಿದ್ದಾನೆ. ಹೌದು.! ನಾನು ಡ್ರೋನ್​ ತಯಾರಿಸಿದ್ದೇನೆ ಎಂದು ಕಾಗೆ ಹಾರಿಸಿದ ಈತ ಸಾಕಷ್ಟು ಟ್ರೋಲಿಗಗರಿಗೆ ಆಹಾರವಾಗಿದ್ದ. ರಂಗುರಂಗಿನ ಕಥೆಕಟ್ಟಿ ಯಾಮಾರಿಸಿದ ಮಾತಿನ ಮಲ್ಲ ಹೊಸ ಪ್ರಾಜೆಕ್ಟ್ ಒಂದಕ್ಕೆ ಕೈ ಹಾಕಿದ್ದನೆ ಎನ್ನುವ ಸುದ್ದಿಗಳು ಹರಿದಾಡುತ್ತಿದೆ. ಇದಕ್ಕೆ ಕಾರಣ ಆತ ಇನ್ಸ್ಟಾ ಖಾತೆಯಲ್ಲಿ ಮಾಡಿದ ಆ ಒಂದು ಪೋಸ್ಟ್.!

ಎಸ್.! ಹಲವು ದಿನಗಳಿಂದ ಸೈಲೆಂಟ್ ಆಗಿದ್ದ ಸ್ವಯಂ ಘೋಷಿತ ಡ್ರೋನ್ ತಯಾರಕ ಪ್ರತಾಪ ಇದೀಗ ಇನ್ಸ್ಟಾಗ್ರಾಂನಲ್ಲಿ, ಕೈಯಲ್ಲಿ ಸೋಲ್ಡರ್ ಗನ್ ಹಿಡಿದು ಫೋಸ್ ನೀಡಿದ ಫೋಟೋವೊಂದನ್ನ ಪೋಸ್ಟ್ ಮಾಡಿದ್ದಾನೆ. ಈ ಬಾರಿ ಹೊಸದಾಗಿ ಏನೋ ಒಂದನ್ನು ಪ್ರಾರಂಭಿಸುತ್ತಿರುವಂತೆ ಮುನ್ಸೂಚನೆ ನೀಡಿದ್ದಾನೆ. ಕೈಗೆ ದೊಡ್ಡ ಹಳದಿ ಗ್ಲೌಸ್ ಕಟ್ಟಿಕೊಂಡು ಟೇಬಲ್ ಮೇಲೊಂದು ಲ್ಯಾಪ್‌ಟಾಪ್‌ ಇಟ್ಟು, ಅದಕ್ಕೆ ಡಾಟಾ ಕೇಬಲ್ ಅಳವಡಿಸಿರುವ ಯಾವುದೋ ಒಂದು ಸಾಧನವನ್ನು ತಮ್ಮ ಮುಂದಿಟ್ಟುಕೊಂಡಿದ್ದಾನೆ.

ಕಣ್ಣಿಗೆ ಕನ್ನಡಕ ಧರಿಸಿ, ಒಂದು ಕೈಯಲ್ಲಿ ಮಷಿನ್ ಹಿಡಿದು ನಗುತ್ತಾ ಕ್ಯಾಮೆರಾಗೆ ಪೋಸ್ ನೀಡಿದ್ದಾನೆ. ಜೊತೆಗೆ ಈ ಫೋಟೊಗೆ  ‘ಕೆಟ್ಟ ಜನರು ನಿಮ್ಮ ಜೀವನವನ್ನು ತೊರೆದಾಗ, ಸರಿಯಾದ ವಿಷಯಗಳು ನಿಮ್ಮ ಜೀವನದಲ್ಲಿ ಶುರುವಾಗಲು ಪ್ರಾರಂಭಿಸುತ್ತವೆ’ ಎಂದು ಕ್ಯಾಪ್ಷನ್ ಕೂಡಾ ಹಾಕಿದ್ದಾನೆ. ಸದ್ಯ ಈ ನೆಟ್ಟಿಗರು ಪ್ರತಾಪನ ಪೋಸ್ಟಿಗೆ ತರತರಹದ ಕಾಮೆಂಟ್ ಮಾಡಿ ಕಾಲೆಳೆದಿದ್ದಾರೆ. ಸದ್ಯ ಯಾವ ಸಂಶೋಧನೆಯಲ್ಲಿ ತೊಡಗಿದ್ದಾನೆ ಎಂದು ಮಾಹಿತಿ ಬಿಟ್ಟುಕೊಡದ ಪ್ರತಾಪನ ಹೊಸ ಸಾಹಸ ಯಾವುದು ಎಂಬುದು ನಿಗೂಢವಾಗಿದೆ.