ದೀಪಾವಳಿ ಪ್ರಯುಕ್ತ ಸ್ಟುಡಿಯೋ ಸ್ವಚ್ಛಗೊಳಿಸುತ್ತಿರುವ ವೇಳೆ ವಿದ್ಯುತ್ ಸ್ಪರ್ಶ: ಇಬ್ಬರು ಫೋಟೊಗ್ರಾಫರ್ ಸಾವು

ಮಂಡ್ಯ: ವಿದ್ಯುತ್​ ತಗುಲಿ ಇಬ್ಬರು ಫೋಟೊಗ್ರಾಫರ್ ಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮದ್ದೂರು ತಾಲೂಕಿನ ಬೆಸಗರಹಳ್ಳಿಯ ಫೋಟೋ ಸ್ಟುಡಿಯೋದಲ್ಲಿ ನಡೆದಿದೆ. ಮಧುಸೂದನ ಮತ್ತು ವಿವೇಕ ಮೃತ ಛಾಯಾಗ್ರಾಹಕರು.

ದೀಪಾವಳಿ ಹಬ್ಬದ ನಿಮಿತ್ತ ಸ್ಟುಡಿಯೋ ಸ್ವಚ್ಛಗೊಳಿಸುತ್ತಿರುವ ವೇಳೆ ಕಬ್ಬಿಣದ ಬೋರ್ಡ್ ತೆರವುಗೊಳಿಸುವಾಗ 11 ಕೆ.ವಿ ವಿದ್ಯುತ್ ತಗುಲಿ ಇಬ್ಬರು ಛಾಯಾಗ್ರಾಹರು ಮೃತಪಟ್ಟಿದ್ದಾರೆ. ಮುಂಜಾಗ್ರತ ಕ್ರಮ ಕೈಗೊಳ್ಳದೆ ಇರುವುದೇ ಈ ಅವಘಡಕ್ಕೆ ಕಾರಣ ಎಂದು ಸ್ಥಳೀಯರು ಹೇಳಿದ್ದಾರೆ. ಎರಡು ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಬೆಸಗರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.