ಚರಂಡಿ ಸ್ವಚ್ಚಗೊಳಿಸದ ಸ್ಥಳೀಯಾಡಳಿತ, ರಸ್ತೆಯಲ್ಲೇ ಹರಿದ ತ್ಯಾಜ್ಯ ನೀರು.! ಹೈರಾಣಾದ ಪ್ರಯಾಣಿಕರು.!

ಯಲ್ಲಾಪುರ: ಪಟ್ಟಣದಲ್ಲಿ ಸೋಮವಾರ ಮಧ್ಯಾಹ್ನ ಒಂದು ತಾಸಿಗೂ ಅಧಿಕ ಕಾಲ ಭಾರೀ ಮಳೆ ಸುರಿಯಿತು.
ಮಳೆಯ ಅಬ್ಬರದಿಂದಾಗಿ ಪಟ್ಟಣದ ವಿವಿಧೆಡೆ ಚರಂಡಿ ನೀರು ರಸ್ತೆಯಲ್ಲಿ ಹರಿದು ವಾಹನಗಳ ಸವಾರರು ಪರದಾಡುವಂತಾಯಿತು. ತಟಗಾರ ಕ್ರಾಸ್, ವಿಶ್ವದರ್ಶನದ ಎದುರು, ಶಿವಾಜಿ ಸರ್ಕಲ್, ಬೆಲ್ ರಸ್ತೆ ಸೇರಿದಂತೆ ಹಲವೆಡೆ ರಸ್ತೆಯ ಮೇಲೆ ಆಳೆತ್ತರದ ನೀರು ನಿಂತು ಸಮಸ್ಯೆ ಉಂಟಾಯಿತು.

ಚರಂಡಿಯ ಕಸ, ತ್ಯಾಜ್ಯಗಳೆಲ್ಲ ರಸ್ತೆ ಮೇಲೆ ಬಂದು ರಾಶಿಬಿದ್ದಿವೆ. ಪಟ್ಟಣ ಪಂಚಾಯತದವರು ಸಮರ್ಪಕವಾಗಿ ಚರಂಡಿ ಸ್ವಚ್ಛತೆ ಕಾರ್ಯ ಕೈಗೊಳ್ಳದ ಕಾರಣ ಜೋರಾಗಿ ಮಳೆ ಸುರಿದಾಗ ಈ ಅವ್ಯವಸ್ಥೆ ಉಂಟಾಗುತ್ತಿದೆ. ಆದರೂ ಸ್ಥಳೀಯ ಆಡಳಿತ ನಿರ್ಲಿಪ್ತವಾಗಿರುವ ಬಗ್ಗೆ ಸ್ಥಳೀಯರು ಅಸಮಾಧಾನ ಹೊರಹಾಕುತ್ತಿದ್ದಾರೆ.