ಗೋಕರ್ಣದಲ್ಲಿ ಸಂಪನ್ನಗೊಂಡ ಶ್ರಾವಣ ಶನಿವಾರದ ವಿಶೇಷ ಪೂಜೆ

ಗೋಕರ್ಣ: ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಶುಭ ಕೃತ್ ಸಂವತ್ಸರದ ಶ್ರಾವಣ ಮಾಸದ ವಿಶೇಷ ಪೂಜೆಗಳು ಅಮಾವಾಸ್ಯೆ ದಿನವಾದ ಶನಿವಾರ ಸನ್ಮಂಗಲವಾಯಿತು. ಮೇಲುಸ್ತುವಾರಿ ಸಮಿತಿಯ ನೇತೃತ್ವದಲ್ಲಿ ಬೆಳಿಗ್ಗೆ ವಿಶೇಷಗಟ್ಲೆ ಪೂಜೆಗಳೊಂದಿಗೆ ಪ್ರಾರಂಭವಾಗಿ ಈ ಶ್ರಾವಣ ಮಾಸದ ವಿಶೇಷ ಪೂಜೆ ನಿರಂತರ ಒಂದು ತಿಂಗಳ ಕಾಲ ರೂಢಿಗತ ಪರಂಪರೆಯಂತೆ ಜರುಗಿತು.

ಮಹಾಪೂಜೆ, ಸುವರ್ಣಶಂಖ ಗಂಗಾಭಿಷೇಕ, ನವರತ್ನಾಲಂಕಾರ,‌ ಸುವರ್ಣ ನಾಗಾಭರಣ ಅಲಂಕಾರ, ರೂಢಿಗತ ಪರಂಪರೆಯಂತೆ 21 ವಿಶೇಷ ಭಕ್ಷಗಳ ನೈವೇದ್ಯದೊಂದಿಗೆ ಮಹಾಮಂಗಳಾರತಿಯೊಂದಿಗೆ ಇಂದಿನ ಪೂಜೆ ಸುಸಂಪನ್ನವಾಯಿತು. ರಾಷ್ಟ್ರದ ಸಮೃದ್ಧಿಗೆ, ಸರ್ವಜನ ಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಯಿತು.

ಉಪಾಧಿವಂತ ಅರ್ಚಕರಾದ ವೇ. ಅಮೃತೇಶ್ ಭಟ್ ಹಿರೇ ಪೂಜಾ ಕೈಂಕರ್ಯವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಮೇಲುಸ್ತುವಾರಿ ಸಮಿತಿ ಸದಸ್ಯರು, ಉಪಾಧಿವಂತರುಗಳು, ಊರ ನಾಗರಿಕರು, ದೇವಾಲಯದ ಸಿಬ್ಬಂದಿಗಳು, ಭಕ್ತರು ಉಪಸ್ಥಿತರಿದ್ದರು.