ಹೊನ್ಮಾವ್ ಸೇತುವೆ ಬಳಿ ಮೀನು ಸಾಗಿಸುತ್ತಿದ್ದ ಲಾರಿ ಪಲ್ಟಿ.! ರಸ್ತೆಯಲ್ಲಿ ಮೀನುಗಳು ಚೆಲ್ಲಾಪಿಲ್ಲಿ.! ಚಾಲಕ ಪ್ರಾಣಾಪಯದಿಂದ ಪಾರು.!

ಕುಮಟಾ: ಮೀನು ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಘಟನೆ ಕುಮಟಾ ತಾಲೂಕಿನ ಅಳ್ವೇಕೋಡಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.

ಮೀನು ತುಂಬಿಕೊಂಡು ಸಾಗುತ್ತಿರುವಾಗ ಕುಮಟಾ ತಾಲೂಕಿನ ಹೊನ್ಮಾವ್ ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಉರುಳಿ ಬಿದ್ದ ಕಾರಣ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಘಟನೆಯಲ್ಲಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.