ಯಲ್ಲಾಪುರ: ತಾಲೂಕಿನ ಅರಬೈಲ್ ಸಮೀಪದ ಫಣಸಗುಳಿ ಬಳಿ ಗಂಗಾವಳಿ ನದಿಗೆ ನಿರ್ಮಿಸಲಾದ ತಾತ್ಕಾಲಿಕ ಸೇತುವೆ ದಾಟಲು ಹೋಗಿ ಲಾರಿಯೊಂದು ನದಿಯಲ್ಲಿ ಬಿದ್ದಿದೆ. ಲಾರಿಯಲ್ಲಿ 6 ಜನರಿದ್ದು, ಅವರಲ್ಕಿ ಐವರನ್ನು ರಕ್ಷಿಸಲಾಗಿದೆ. ಒನ್ನೊಬ್ಬ ಲಾರಿಯಲ್ಲೇ ಸಿಲುಕಿರುವುದಾಗಿ ಹೇಳಲಾಗಿದ್ದು, ಪೊಲೀಸರು, ಅಗ್ನಿಶಾಮಕ ದಳದವರು ಶೋಧ ನಡೆಸುತ್ತಿದ್ದಾರೆ. ಲಾರಿಯಲ್ಲಿದ್ದವರು ಬಂಕಿಕೊಡ್ಲ ಹಾಗೂ ಹಿಲ್ಲೂರಿನವರಾಗಿದ್ದಾರೆ.
ಸೇತುವೆಯ ಮೇಲೆ ನೀರು ಹರಿಯುತ್ತಿದ್ದರೂ, ಚಾಲಕನ ನಿರ್ಲಕ್ಷ್ಯತನದಿಂದ ಸೇತುವೆ ದಾಟಲು ಮುಂದಾಗಿದ್ದಾನೆ. ಆ ವೇಳೆ ಇನ್ನೊಂದು ದಡದಲ್ಲಿದ್ದ ಜನರು ಸೇತುವೆ ಮೇಲೆ ಬಾರದಂತೆ ಕೂಗಿ ಹೇಳುತ್ತಲೇ ಇದ್ದರೂ ಹಿಂದಕ್ಕೆ ಹೋಗದೇ ಸೇತುವೆ ಮೇಲೆ ಲಾರಿ ಚಲಾಯಿಸಿದ್ದು, ಲಾರಿ ನದಿಯಲ್ಲಿ ಬಿದ್ದಿದೆ. ಚಾಲಕನ ಹುಚ್ಚುತನವೇ ಈ ಅವಘಡಕ್ಕೆ ಕಾರಣವಾಗಿದೆ