ಬಾಗಲಕೋಟೆ: ನನ್ನ ಬಳಿಯೂ ಸರ್ಕಾರದ ಒಳಗಿನ ಅನೇಕ ಮಾಹಿತಿಗಳಿವೆ. ಸಮಯ, ಸಂದರ್ಭ ಬಂದಾಗ ಬಹಿರಂಗ ಪಡಿಸುತ್ತೇನೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಎಎಪಿ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಸರ್ಕಾರದ ಒಳಗೆ ಇದ್ದಾಗ ನಮಗೂ ಸಾಕಷ್ಟು ವಿಷಯಗಳು ಗೊತ್ತಿರುತ್ತದೆ. ಅದು ಸರ್ಕಾರದ ನೀತಿಗಳ ಬಗ್ಗೆಯೂ ಇರಬಹುದು ಅಥವಾ ವಯಕ್ತಿಕವಾಗಿಯೂ ಇರಬಹುದು. ಅದರ ಬಗ್ಗೆ ಬೀದಿಯಲ್ಲಿ ಹೇಳಿಕೊಂಡು ಹೋಗುವ ಅವಶ್ಯಕತೆ ಇಲ್ಲ. ಸಮಯ ಬಂದಾಗ ಆ ಬಗ್ಗೆ ಮಾತಾಡೋಣ ಎಂದರು. ನಿಮ್ಮ ಬಳಿ ಕೆಲವು ಅಸ್ತ್ರ ಇವೆಯಾ ಎಂಬ ಮಾಧ್ಯಮದವರ ಪ್ರಶ್ನೆಗೆ, ಭಾಸ್ಕರ್ ರಾವ್ ಈ ರೀತಿ ಪ್ರತಿಕ್ರಯಿಸಿದರು.