ಮುಂಡಳ್ಳಿ ಶಾಲೆಗೆ ಲಕ್ಷ್ಮೀ ಹೊನ್ನಪ್ಪ ನಾಯ್ಕ ಸ್ಮರಣಾರ್ಥ ರೂ10 ಲಕ್ಷ ದೇಣಿಗೆ

ಭಟ್ಕಳ:
ತಾಲೂಕಿನ ಮುಂಡಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ನಂ ೨ ಶಾಲೆಗೆ ಮಂಡಳ್ಳಿ ನೀರಗದ್ದೆಯ ಕೇಶ್ಚಿಮನೆ ದಿವಂಗತ ಲಕ್ಷ್ಮೀ ಹೊನ್ನಪ್ಪ ನಾಯ್ಕ ಸ್ಮರಣಾರ್ಥ ಅವರ ಕುಟುಂಬದವರು ರೂ ೧೦ ಲಕ್ಷ ಮೊತ್ತದ ದೇಣಿಗೆ ನೀಡಿದ್ದಾರೆ.

ಈಗಾಗಲೇ ಸುಮಾರು ೪ ಲಕ್ಷ ರೂ ವೆಚ್ಚದಲ್ಲಿ ಸಂಪೂರ್ಣ ಶಾಲೆಗೆ ಅತ್ಯುತ್ತಮ ಗುಣಮಟ್ಟದ ಶೀಟ್ ಅಳವಡಿಸಿಕೊಟ್ಟಿದ್ದಾರೆ. ಇದರೊಂದಿಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಹೈಟೆಕ್‌ ಶೌಚಾಲಯ ಹಾಗೂ ನೂತನ ಅಡುಗೆ ಕೋಣೆಯನ್ನು ನಿರ್ಮಿಸಿಕೊಡಲು ಮುಂದಾಗಿದ್ದಾರೆ.

ಇವರ ಈ ಅಭೂತಪೂರ್ವ ಕೊಡುಗೆ ಮಾದರಿಯಾಗಿದ್ದು, ಈ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಶಾಲಾ ಶಿಕ್ಷಕರ ವೃಂದ ಹಾಗೂ ವಿದ್ಯಾರ್ಥಿ ವೃಂದ, ಪಾಲಕ-ಪೋಷಕ ವೃಂದ ಅತೀವ ಆನಂದ ವ್ಯಕ್ತಪಡಿಸಿ ಕೃತಜ್ಞತೆ ಅರ್ಪಿಸಿದ್ದಾರೆ.